ಭಯೋತ್ಪಾದಕರ ವಿರುದ್ಧ ಬಿರುಸಿನ ಕಾರ್ಯಾಚರಣೆ: ಎನ್‍ಕೌಂಟರ್‍ನಲ್ಲಿ ಇಬ್ಬರು ಉಗ್ರರ ಸಾವು

ಶ್ರೀನಗರ, ಏ.1-ಭಯೋತ್ಪಾದಕರ ವಿರುದ್ಧ ಬಿರುಸಿನ ಕಾರ್ಯಾಚರಣೆ ಮುಂದುವರಿಸಿರುವ ಭದ್ರತಾ ಪಡೆಗಳು ಇಂದು ಮೂರು ಪ್ರತ್ಯೇಕ ಎನ್‍ಕೌಂಟರ್‍ಗಳಲ್ಲಿ ಇಬ್ಬರು ಅಗ್ರ ಕಮಾಂಡರ್‍ಗಳೂ ಸೇರಿದಂತೆ ಎಂಟು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಈ ಕಾರ್ಯಾಚರಣೆ ವೇಳೆ ಉಗ್ರಗಾಮಿಯೊಬ್ಬ ಶರಣಾಗಿದ್ದಾನೆ.
ದಕ್ಷಿಣ ಕಾಶ್ಮೀರದಲ್ಲಿ ಇಂದು ನಡೆದ ಎನ್‍ಕೌಂಟರ್‍ಗಳಲ್ಲಿ ಭದ್ರತಾಪಡೆ ದೊಡ್ಡ ಮಟ್ಟದ ಯಶಸ್ಸು ಸಾಧಿಸಿದೆ. ಹತರಾದ ಎಂಟು ಉಗ್ರರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕ್ಷಿಪ್ರ ಕಾರ್ಯಾಚರಣೆಗಳೊಂದಿಗೆ ಪಾಕಿಸ್ತಾನಿ ಬೆಂಬಲಿತ ಭಯೋತ್ಪಾದಕರ ಹುಟ್ಟಡಗಿಸುವಲ್ಲಿ ಭದ್ರತಾ ಪಡೆಗಳು ಸಫಲವಾಗಿವೆ.
ಅನಂತನಾಗ್ ಜಿಲ್ಲೆಯ ನಡೆದ ಗುಂಡಿನ ಕಾಳಗದಲ್ಲಿ ಒಬ್ಬ ಉಗ್ರ ಬಲಿಯಾಗಿ ಮತ್ತೊಬ್ಬ ಶರಣಾಗಿದ್ದರೆ, ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಭೀಕರ ಎನ್‍ಕೌಂಟರ್‍ನಲ್ಲಿ ಏಳು ಉಗ್ರರನ್ನು ಯೋಧರು ಹೊಡೆದುರುಳಿಸಿದ್ದಾರೆ. ಶೋಪಿಯಾನ್ ಪ್ರದೇಶದ ಕಚ್‍ದೂರದಲ್ಲಿ ಮತ್ತೊಂದು ಎನ್‍ಕೌಂಟರ್ ನಡೆದಿದೆ
ಇಬ್ಬರು ಅಗ್ರ ಕಮ್ಯಾಂಡರ್‍ಗಳೂ ಸೇರಿದಂತೆ ಎಂಟು ಉಗ್ರರನ್ನು ಯೋಧರು ಎನ್‍ಕೌಂಟರ್‍ನಲ್ಲಿ ಹೊಡೆದುರುಳಿಸಿರುವುದನ್ನು ಜಮ್ಮು ಮತ್ತು ಕಾಶ್ಮೀರದ ಪೆÇಲೀಸ್ ಮಹಾ ನಿರೀಕ್ಷಕ (ಡಿಜಿಪಿ) ಎಸ್.ಪಿ. ವೈದ್ಯ ಖಚಿತಪಡಿಸಿದ್ದಾರೆ.
ಅನಂತ್‍ನಾಗ್ ಜಿಲ್ಲೆಯ ಡಿಯಲ್‍ಗಂ ಪ್ರದೇಶದಲ್ಲಿ ಉಗ್ರನೊಬ್ಬನನ್ನು ಯೋಧರು ಭೇಟೆಯಾಡಿದ್ದಾರೆ. ಶರಣಾಗುವಂತೆ ಆತನ ಕುಟುಂಬ ಮತ್ತು ಪೆÇಲೀಸರು ನಡೆಸಿದ ಪ್ರಯತ್ನ ವಿಫಲವಾದಾಗ ಎನ್‍ಕೌಂಟರ್‍ನಲ್ಲಿ ಆತನನ್ನು ಕೊಲ್ಲಲಾಯಿತು. ಶರಣಾದ ಮತ್ತೊಬ್ಬನನ್ನು ಸೆರೆ ಹಿಡಿಯಲಾಗಿದೆ. ಶೋಪಿಯಾನ್‍ನ ಡ್ರಗ್ಗಡ್ ಪ್ರದೇಶದಲ್ಲಿ ಇಬ್ಬರು ಅಗ್ರ ಕಮ್ಯಾಂಡರಗಳೂ ಸೇರಿದಂತೆ ಏಳು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ ಎಂದು ವೈದ್ಯ ಟ್ವಿಟರ್‍ನಲ್ಲಿ ವಿವರ ನೀಡಿದ್ದಾರೆ.
ಶೋಪಿಯಾನ್‍ನ ಕಚ್‍ದೂರ ಪ್ರದೇಶದಲ್ಲಿ ಉಗ್ರಗಾಮಿಗಳೊಂದಿಗೆ ಮತ್ತೊಂದು ಎನ್‍ಕೌಂಟರ್ ನಡೆದಿದೆ. ಈ ಕಾರ್ಯಾಚರಣೆಯಲ್ಲಿ ಕೆಲವು ನಾಗರಿಕರನ್ನು ರಕ್ಷಿಸಲಾಗಿದೆ ಎಂದು ಡಿಜಿಪಿ ಮಾಹಿತಿ ನೀಡಿದ್ದಾರೆ.
ಈ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ನಿಖರ ಮಾಹಿತಿ ಮೇರೆಗೆ ಪೆÇಲೀಸರು ಡ್ರಗಡ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು. ಆಗ ಮರೆಯಲ್ಲಿ ಅಡಗಿದ್ದ ಉಗ್ರರು ಯೋಧರ ಮೇಲೆ ಗುಂಡು ಹಾರಿಸಿದಾಗ ಭೀಕರ ಎನ್‍ಕೌಂಟರ್ ನಡೆಯಿತು. ಈ ಗುಂಡಿನ ಕಾಳಗದಲ್ಲಿ ಏಳು ಉಗ್ರರು ಹತರಾದರು ಎಂದು ಉನ್ನತ ಪೆÇಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹತ ಉಗ್ರಗಾಮಿಗಳಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರದೇಶಗಳಲ್ಲಿ ಅಡಗಿರಬಹುದಾದ ಮತ್ತಷ್ಟು ಉಗ್ರರ ಬೇಟೆ ಕಾರ್ಯಾಚರಣೆ ಮುಂದುವರಿದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ