ಬೆಂಗಳೂರು, ಏ.1- ಹಣವನ್ನು ಪಣವಾಗಿ ಕಟ್ಟಿಕೊಂಡು ಜೂಜಾಡುತ್ತಿದ್ದ ಹೊಟೇಲ್ವೊಂದರ ಮೇಲೆ ಸಿಸಿಬಿ ಪೆÇಲೀಸರು ದಾಳಿ ಮಾಡಿ ಏಳು ಮಂದಿಯನ್ನು ಬಂಧಿಸಿ 1.21 ಲಕ್ಷ ರೂ. ಹಣ ವಶಪಡಿಸಿಕೊಂಡಿದ್ದಾರೆ.
ಚಂದ್ರಶೇಖರ್, ರಮೇಶ್, ಸತೀಶ್, ಸುದರ್ಶನ್, ವೆಂಕಟೇಶ್, ಅನಿಲ ಮತ್ತು ಧನಂಜಯ ಬಂಧಿತ ಜೂಜುಕೋರರು. ಬೆಳ್ಳಂದೂರು ವ್ಯಾಪ್ತಿಯ ಸರ್ಜಾಪುರ ಮುಖ್ಯರಸ್ತೆಯಲ್ಲಿನ ಅಗ್ನಿಶಾಮಕ ಠಾಣಾ ಎದುರಿನಲ್ಲಿರುವ ಹೊಟೇಲ್ವೊಂದರಲ್ಲಿ ರೂಮ್ ಪಡೆದ ಕೆಲವರು ಜೂಜಾಡುತ್ತಿದ್ದಾರೆಂಬ ಮಾಹಿತಿ ಸಿಸಿಬಿ ಪೆÇಲೀಸರಿಗೆ ಲಭಿಸಿದೆ.
ತಕ್ಷಣ ಕಾರ್ಯಪ್ರವೃತ್ತರಾದ ಪೆÇಲೀಸರು ಹೊಟೇಲ್ ಮೇಲೆ ದಾಳಿ ಮಾಡಿ ಜೂಜಾಡುತ್ತಿದ್ದ ಏಳು ಮಂದಿಯನ್ನು ಬಂಧಿಸಿ ಪಣಕ್ಕಿಟ್ಟಿದ್ದ 1.21 ಲಕ್ಷ ರೂ. ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡು ಬೆಳ್ಳಂದೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.