ನವದೆಹಲಿ, ಏ.1- ಅನೇಕ ಹಣಕಾಸು ವ್ಯವಹಾರ ಮತ್ತು ಆಸ್ತಿಪಾಸ್ತಿ ವಹಿವಾಟಿಗೆ ಆಧಾರ್ನನ್ನು ಕಡ್ಡಾಯಗೊಳಿಸುವುದರಿಂದ ಭ್ರಷ್ಟ ಅಧಿಕಾರಿಗಳ ಅಕ್ರಮ
ಗಳಿಕೆಯನ್ನು ಪರಿಣಾಮಕಾರಿಯಾಗಿ ಪತ್ತೆ ಮಾಡಬಹುದಾಗಿದೆ ಎಂದು ಕೇಂದ್ರೀಯ ಜಾಗೃತ ಆಯೋಗ(ಸಿವಿಸಿ) ಹೇಳಿದೆ.
ವ್ಯಕ್ತಿಯ ಶಾಶ್ವತ ಖಾತೆ ಸಂಖ್ಯೆ(ಪ್ಯಾನ್) ಮತ್ತು ಆಧಾರ್ ಕಾರ್ಡ್ಗಳ ಮೂಲಕ ಲಭ್ಯವಿರುವ ಮಾಹಿತಿಯಿಂದ ಕಾರ್ಡುದಾರರ ಹಣಕಾಸು ವ್ಯವಹಾರಗಳನ್ನು ಸುಲಭವಾಗಿ ಪತ್ತೆ ಮಾಡಬಹುದಾಗಿದೆ ಎಂದು ಸಿವಿಸಿ ಆಯುಕ್ತ ಕೆ.ವಿ.ಚೌಧರಿ ಹೇಳಿದ್ದಾರೆ.
ವಾರ್ತಾ ಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಆಧಾರ್ ಕಾರ್ಡ್ ಮಾರ್ಗದ ಮೂಲಕ ಅಧಿಕಾರಸ್ಥರ ಭ್ರಷ್ಟಾಚಾರ ಮತ್ತು ಲಂಚಗುಳಿತನವನ್ನು ಪತ್ತೆ ಮಾಡಬಹುದು. ಹೀಗಾಗಿ ಇದೊಂದು ಪರಿಣಾಮಕಾರಿ ಅಸ್ತ್ರವಾಗಲಿದೆ ಎಂದು ಹೇಳಿದರು.
ಪ್ಯಾನ್ಕಾಡ್ ್ ಮತ್ತು ಆಧಾರ್ ಸಂಪರ್ಕದಿಂದ ಆತ ಅಥವಾ ಆಕೆಯ ಹಣಕಾಸು ವ್ಯವಹಾರಗಳು ಮತ್ತು ಆಸ್ತಿಪಾಸ್ತಿ ವಹಿವಾಟುಗಳ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸುತ್ತದೆ. ಇದರಿಂದ ಉನ್ನತ ಹುದ್ದೆಯಲ್ಲಿರುವ ಸರ್ಕಾರಿ ಅಧಿಕಾರಿಗಳು ಸೇರಿದಂತೆ ಪ್ರಭಾವಿ ವ್ಯಕ್ತಿಗಳು ನಡೆಸಿರಬಹುದಾದ ಅಕ್ರಮ ಅವ್ಯವಹಾರಗಳು ಮತ್ತು ಕಾನೂನು ಬಾಹಿರ ಗಳಿಕೆಯನ್ನು ಸುಲಭವಾಗಿ ಮತ್ತು ಪರಿಣಾಮಕಾರಿಯಾಗಿ ಪತ್ತೆ ಮಾಡಬಹುದು ಎಂದು ಹೇಳಿದ್ದಾರೆ.