ಬೆಂಗಳೂರು, ಏ.1-ಬ್ರೆಜಿಲ್ ಮೂಲದ ವ್ಯಕ್ತಿಯೊಬ್ಬರ ಕಾರಿನ ಗಾಜು ಒಡೆದ ದುಷ್ಕರ್ಮಿಗಳು ಅದರಲ್ಲಿದ್ದ ಲ್ಯಾಪ್ಟಾಪ್, ಚೆಕ್ ಪುಸ್ತಕ ಹಾಗೂ ಇನ್ನಿತರ ದಾಖಲೆಗಳನ್ನು ಕದ್ದೊಯ್ದಿರುವ ಘಟನೆ ಕೊಡಿಗೆಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬ್ರೆಜಿಲ್ ಪ್ರಜೆ ಮಾರ್ಕೆಲೋ ಜಿಮ್ ಕೋ ಎಂಬುವರು ಕೊಡಿಗೆಹಳ್ಳಿಯಲ್ಲಿ ವಾಸವಾಗಿದ್ದು, ಕಂಪೆನಿಯೊಂದರ ಡೈರೆಕ್ಟರ್ ವೃತ್ತಿ ಮಾಡುತ್ತಿದ್ದಾರೆ. ರಾತ್ರಿ 8 ಗಂಟೆ ಸಮಯದಲ್ಲಿ ಸಹಕಾರ ನಗರದ 8ನೇ ಕ್ರಾಸ್ ಬಳಿ ಮಾರ್ಕೆಲೋ ಅವರು ಕಾರು ನಿಲ್ಲಿಸಿ ಸಮೀಪದ ಎಟಿಎಂಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ದುಷ್ಕರ್ಮಿಗಳು ಕಾರಿನ ಗಾಜು ಒಡೆದು ಲ್ಯಾಪ್ಟಾಪ್, ಚೆಕ್ಪುಸ್ತಕ ಸೇರಿದಂತೆ ಇನ್ನಿತರ ದಾಖಲೆಗಳನ್ನು ಕದ್ದೊಯ್ದಿದ್ದಾರೆ.
ಮಾರ್ಕೆಲೋ ಅವರು ಎಟಿಎಂನಿಂದ ತೆಗೆದುಕೊಂಡು ಕಾರಿನ ಬಳಿ ಬಂದಾಗ ಗಾಜು ಒಡೆದು ಕಳ್ಳತನ ನಡೆಸಿರುವುದು ಗೊತ್ತಾಗಿದೆ. ತಕ್ಷಣ ಮಾರ್ಕೆಲೋ ಅವರು ಕೊಡಿಗೆಹಳ್ಳಿ ಪೆÇಲೀಸರಿಗೆ ದೂರು ನೀಡಿದ್ದಾರೆ.