ಬೆಂಗಳೂರು:ಮಾ-31: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿದ್ದ ಎಐಎಡಿಎಂಕೆ ಮಾಜಿ ನಾಯಕಿ ವಿ.ಕೆ ಶಶಿಕಲಾ ತಮ್ಮ ಪೆರೋಲ್ ಅವಧಿ ಮುಗಿಯುವ ಮುನ್ನವೇ ಪರಪ್ಪನ ಅಗ್ರಹಾರ ಜೈಲಿಗೆ ವಾಪಸಾಗುತ್ತಿದ್ದಾರೆ.
ಪತಿ ನಟರಾಜನ್ ಸಾವಿನ ನಂತರ ಅಂತ್ಯ ಸಂಸ್ಕಾರಕ್ಕೆಂದು ಶಶಿಕಲಾ 15 ದಿನಗಳ ಕಾಲ ತುರ್ತು ಪೆರೋಲ್ ಪಡೆದಿದ್ದರು. ಆದರೆ ಪೆರೋಲ್ ಅವಧಿ ಮುಗಿಯಲು ಇನ್ನೂ ಮೂರು ದಿನ ಬಾಕಿ ಇರುವಾಗಲೇ ಶಶಿಕಲಾ ತಮಿಳುನಾಡಿನಿಂದ ಬೆಂಗಳೂರಿನ ಪರಪ್ಪನ ಅಗ್ರಹಾರದತ್ತ ಹೊರಟಿದ್ದಾರೆ.
ಇದೇ ತಿಂಗಳ 20 ರಂದು 15 ದಿನಗಳ ತುರ್ತು ಪೆರೋಲ್ ಅನ್ನು ಅಂದರೆ ಏ.3ರರವರೆಗೂ ಶಶಿಕಲಾಗೆ ಪೆರೋಲ್ ನೀಡಲಾಗಿತ್ತು. ಏಪ್ರಿಲ್ 3 ರ ವರೆಗೂ ಶಶಿಕಲಾಗೆ ಪೆರೋಲ್ ಇದ್ದರೂ ಇಂದೇ ಪರಪ್ಪನ ಅಗ್ರಹಾರಕ್ಕೆ ಶಶಿಕಲಾ ಬರುತ್ತಿದ್ದಾರೆ. ಬೆಳಗ್ಗೆ ಒಂಭತ್ತು ಗಂಟೆ ವೇಳೆಗೆ ಚೆನ್ನೈನ ತಮ್ಮ ನಿವಾಸದಿಂದ ಹೊರಟಿರುವ ಶಶಿಕಲಾ ಸಂಜೆ ಐದು ಗಂಟೆ ಸುಮಾರಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ತಲುಪಲಿದ್ದಾರೆ.
ಪತಿ ನಟರಾಜನ್ ಮೃತರಾದ ನಂತರ ಶಶಿಕಲಾ ಮನೆಯಲ್ಲಿ ಆಸ್ತಿ ಕಲಹ ಆರಂಭವಾಗಿದ್ದು ಆಸ್ತಿ ಹಂಚಿಕೆ ಮಾಡುವಂತೆ ಸಂಬಂಧಿಕರು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಇದೇ ಕಾರಣದಿಂದ ಬೇಸರಗೊಂಡಿರುವ ಶಶಿಕಲಾ ಪೆರೋಲ್ ಅವಧಿ ಇದ್ದರೂ ಸ್ವಯಂಪ್ರೇರಿತವಾಗಿ ಜೈಲಿನತ್ತ ಹೊರಟಿದ್ದಾರೆ ಎನ್ನಲಾಗಿದೆ.
VK Sasikala,returns to Bengaluru jail,emergency parole