
ಪೇಶಾವರ್, ಮಾ.31-ಅತ್ಯಂತ ಕಿರಿಯ ನೊಬೆಲ್ ಪ್ರಶಸ್ತಿ ಪುರಸ್ಕøತೆ ಹಾಗೂ ಶಿಕ್ಷಣ ಕಾರ್ಯಕರ್ತೆ ಮಲಾಲ ಯೂಸೆಫ್ಝೈ ಇಂದು ಪಾಕಿಸ್ತಾನದ ತಮ್ಮ ತವರೂರು ಸ್ವಾಟ್ ಕಣಿವೆಗೆ ಭೇಟಿ ನೀಡಿದರು. ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಅಭಿಯಾನ ನಡೆಸುತ್ತಿದ್ದಾರೆಂದು ಮಲಾಲ ಮೇಲೆ ಕುಪಿತಗೊಂಡ ತಾಲಿಬಾನ್ ಉಗ್ರರು ಅವರ ತಲೆಗೆ ಗುಂಡು ಹಾರಿಸಿದ್ದರು. ಈ ಘಟನೆಯ ನಂತರ ಆರು ವರ್ಷಗಳ ಬಳಿಕ ತಾಯ್ನಾಡು ಪಾಕಿಸ್ತಾನಕ್ಕೆ ಭೇಟಿ ನೀಡಿರುವ ಮಲಾಲ ಇಂದು ತಮ್ಮ ಪೆÇೀಷಕರು ಮತ್ತು ಕುಟುಂಬ ಸದಸ್ಯರೊಂದಿಗೆ ಖೈಬರ್ ಪಾಖ್ತುನ್ಕ್ವಾ ಪ್ರಾಂತ್ಯದ ಸ್ವಾಟ್ ಜಿಲ್ಲೆಗೆ ಭೇಟಿ ನೀಡಿ ಭಾರೀ ಭದ್ರತೆಯೊಂದಿಗೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.
ಮಿನ್ಗೋರಾದ ಮಕನ್ ಬಾಗ್ನಲ್ಲಿ ತಮ್ಮ ಪೂರ್ವಜರ ಮನೆಗೆ ಭೇಟಿ ನೀಡಿದ ನಂತರ ಅವರು ಶಾಂಗ್ಲಾ ಜಿಲ್ಲೆಯಲ್ಲಿ ಬಾಲಕಿಯರ ಶಾಲೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಹೋರಾಟ ಮುಂದುವರಿಸುವುದಾಗಿ ಹೇಳಿದರು.