ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಒಂದು ಲಕ್ಷ ರೂ. ನಗದು ಹಾಗೂ ಅಪಾರ ಪ್ರಮಾಣದ ಬಟ್ಟೆಗಳನ್ನು ವಶ:

ಮಂಡ್ಯ, ಮಾ.31-ಚುನಾವಣಾಧಿಕಾರಿಗಳು ದಾಳಿ ನಡೆಸಿ ಯಾವುದೇ ದಾಖಲೆಗಳಿಲ್ಲದೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಒಂದು ಲಕ್ಷ ರೂ. ನಗದು ಹಾಗೂ ಅಪಾರ ಪ್ರಮಾಣದ ಬಟ್ಟೆಗಳನ್ನು ವಶಕ್ಕೆ ಪಡೆದಿದ್ದಾರೆ.

ನಗರದ ಹೊರವಲಯದ ಜ್ಯೋತಿ ಇಂಟರ್‍ನ್ಯಾಷನಲ್ ಸಮೀಪ (ಕಿರಂಗದೂರು ಗೇಟ್) ಈ ದಾಳಿ ನಡೆದಿದೆ.

ಮೈಸೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಫೆÇೀರ್ಡ್ ಕಾರು ತಡೆದು ಪರಿಶೀಲನೆ ನಡೆಸಿದಾಗ ಯಾವುದೇ ದಾಖಲೆ ಇಲ್ಲದೆ ಹಣ ಹಾಗೂ ಅಪಾರ ಪ್ರಮಾಣದ ಸೀರೆ, ಟೀಶರ್ಟ್ ಇನ್ನಿತರ ಬಟ್ಟೆಗಳು ಪತ್ತೆಯಾಗಿದ್ದು, ಎಲ್ಲವನ್ನು ಚುನಾವಣಾಧಿಕಾರಿಗಳು ತಮ್ಮ ಅಧೀನಕ್ಕೆ ಪಡೆದುಕೊಂಡಿದ್ದಾರೆ.
ಕಾರು ಪರಿಶೀಲನೆ ವೇಳೆ ಚಾಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಮತ್ತೊಂದು ಪ್ರಕರಣ: ಬನ್ನೂರು ರಸ್ತೆಯ ಮರೀಗೌಡ ಬಡಾವಣೆ ಬಳಿ ಓಮ್ನಿ ಕಾರಿನಲ್ಲಿ ದಾಖಲೆ ಇಲ್ಲದೆ ಬಟ್ಟೆಗಳನ್ನು ಸಾಗಿಸುವ ವೇಲೆ ಚುನಾವಣಾಧಿಕಾರಿಗಳು ತಪಾಸಣೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.

ಉಪವಿಭಾಗಾಧಿಕಾರಿ ರಾಜೇಶ್ ನೇತೃತ್ವದಲ್ಲಿ ಈ ಎರಡೂ ದಾಳಿಗಳು ನಡೆದಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ