ಆಗ್ರಾ, ಮಾ. 31-ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಗ್ರಹಿಸಲಾಗುವ ಟೋಲ್ ಎಪ್ರಿಲ್ 1ರಿಂದ ಏರಿಕೆಯಾಗಲಿದ್ದು, ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ. ಈಗಿನ ಶೇ 5ರಷ್ಟು ಟೋಲ್ನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶೇ 5ರಿಂದ ಶೇ7ರ ತನಕ ಏರಿಸಿದೆ. ಇದರಿಂದಾಗಿ ಕೆಲವೊಂದು ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗುವ ಸಾಧ್ಯತೆಯಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದೇಶದಾದ್ಯಂತ 372 ಟೋಲ್ ಪ್ಲಾಝಾಗಳನ್ನು ಹೊಂದಿದ್ದು, ಪ್ರತಿ ವಿತ್ತೀಯ ವರ್ಷದ ಆರಂಭದಲ್ಲಿ ಟೋಲ್ ದರ ಪರಿಷ್ಕರಿಸಲಾಗುತ್ತಿದೆ. ಇದನ್ನು ಹೋಲ್ಸೇಲ್ ದರ ಸೂಚ್ಯಂಕದ ಆಧಾರದಲ್ಲಿ ಪರಿಷ್ಕರಿಸುವುದರಿಂದ ಒಂದೇ ಪ್ರಾಂತ್ಯದ ವಿವಿಧ ಟೋಲ್ ಪ್ಲಾಝಾಗಳಲ್ಲಿ ದರಗಳು ವಿಭಿನ್ನವಾಗಲಿವೆ ಎಂದು ರಾಷ್ಟ್ರೀಯ ಹೆದ್ದಾರಿ 2 ಇದರ ಯೋಜನಾ ನಿರ್ದೇಶಕ ಮುಹಮ್ಮದ್ ಸಫಿ ಹೇಳಿದ್ದಾರೆ.