
ನವದೆಹಲಿ, ಮಾ.31- ಕ್ರೂರ ಇಸ್ಲಾಮಿಕ್ ಸ್ಟೇಟ್ ಉಗ್ರರಿಂದ ಹತ್ಯೆಯಾದ 39 ಭಾರತೀಯರ ಅವಶೇಷಗಳನ್ನು ತರಲು ಇರಾಕ್ಗೆ ತೆರಳಲು ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ವಿ.ಕೆ.ಸಿಂಗ್ ಸಜ್ಜಾಗಿದ್ದಾರೆ. ಈ ಸಂಬಂಧ ಬಾಗ್ದಾದ್ ರಾಯಭಾರಿಯಿಂದ ಸೂಚನೆ ಬಂದ ಕೂಡಲೇ ಯಾವುದೇ ಕ್ಷಣದಲ್ಲಿ ಅವರು ಇರಾಕ್ಗೆ ತೆರಳಲಿದ್ದಾರೆ. ಐಎಸ್ ಭಯೋತ್ಪಾದಕರಿಂದ ಹತ್ಯೆಯಾದ 39 ಭಾರತೀಯರ ಅವಶೇಷಗಳನ್ನು ತರಲು ಸಿ-17 ವಿಮಾನದಿಂದ ಸಮ್ಮತಿ ದೊರೆತ ಕೂಡಲೇ ತಾವು ಬಾಗ್ದಾದ್ಗೆ ತೆರಳುವುದಾಗಿ ಸಚಿವ್ ವಿ.ಕೆ.ಸಿಂಗ್ ತಿಳಿಸಿದ್ದಾರೆ.