ರನ್​ ವಿತ್​ ಎಂಐ ಮ್ಯಾರಥಾನ್​’ ನಲ್ಲಿ ಪಾಲ್ಗೊಂಡ ಹೃತಿಕ್​ ರೋಷನ್​

ಬೆಂಗಳೂರು:ಮಾ-31: ಬಾಲಿವುಡ್​ ನಟ ಹೃತಿಕ್​ ರೋಷನ್​ ಇಂದು  ರಾಜಧಾನಿ ಬೆಂಗಳೂರಿನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದರು.

ಮಾನ್ಯತಾ ಟೆಕ್​ಪಾರ್ಕ್​ನಲ್ಲಿ ಏರ್ಪಡಿಸಿದ್ದ ‘ರನ್​ ವಿತ್​ ಎಂಐ ಮ್ಯಾರಥಾನ್​’ ನಲ್ಲಿ ಪಾಲ್ಗೊಂಡಿದ್ದ ಹೃತಿಕ್​ ರೋಷನ್ ಜತೆ ಇಂಡಿಯನ್​ ಸೂಪರ್​ ಮಾಡೆಲ್​ ಮಿಲಿಂದ್​ ಸೋಮನ್​ ಕೂಡ ಪಾಲುಗೊಂಡಿದ್ದರು.

ಈ ವೇಳೆ ಮಾತನಾಡಿದ ಹೃತಿಕ್​, ಇಲ್ಲಿನ ಜನರ ಎನರ್ಜಿ ನೋಡಿದರೆ ಖುಷಿಯಾಗುತ್ತಿದೆ. ಈ ಮ್ಯಾರಥಾನ್​ನಲ್ಲಿ ನಿಮ್ಮೊಟ್ಟಿಗೆ ಪಾರ್ಟಿಸಿಪೇಟ್​ ಮಾಡುತ್ತಿರುವುದಕ್ಕೆ ಹೆಮ್ಮೆ ಇದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ