ಬೀದರ್‌ ಸಂಸದ ಭಗವಂತ ಖೂಬಾ ಅವರ ಹಿಂದಿ ಟ್ವೀಟ್ ಗೆ ಆಕ್ರೋಶ

ಬೆಂಗಳೂರು:ಮಾ-31: ಹಿಂದಿಯಲ್ಲಿ ಟ್ವೀಟ್‌ ಮಾಡಿರುವ ಬೀದರ್‌ ಸಂಸದ ಭಗವಂತ ಖೂಬಾ ವಿರುದ್ಧ ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತವಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಖೂಬಾ ಅವರು ಹಿಂದಿ ರಾಷ್ಟ್ರಭಾಷೆ ಎಂದಿದ್ದಾರೆ.

ಬೀದರ್‌ನಿಂದ ಹೊಸ ರೈಲುಗಳ ಚಾಲನೆಗೆ ಕೇಂದ್ರದಿಂದ ದೊರೆತಿರುವ ಮಂಜೂರಾತಿ ಪತ್ರವನ್ನು ಶುಕ್ರವಾರ ಟ್ವಿಟರ್‌ನಲ್ಲಿ ಪ್ರಕಟಿಸಿಕೊಂಡಿದ್ದರು. ಕನ್ನಡದಲ್ಲಿ ಟ್ವೀಟ್‌ ಇಲ್ಲದ್ದು ಪರ–ವಿರೋಧ ಚರ್ಚೆಗೆ ಗ್ರಾಸವಾಯಿತು.

‌ಖೂಬಾ ಅವರನ್ನು ಟ್ಯಾಗ್‌ ಮಾಡಿ ‘ಇವರು ಕರ್ನಾಟಕ ಸಂಸದರೋ ಅಥವಾ ಉತ್ತರಪ್ರದೇಶದವರೋ ತಿಳಿಯುತ್ತಿಲ್ಲ….ನಾಡದ್ರೋಹಿಗಳಿಗೆ ಧಿಕ್ಕಾರ’ ಎಂದು ಟ್ವೀಟಿಗರೊಬ್ಬರು ಪ್ರಕಟಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸಂಸದರು ಹಿಂದಿ ರಾಷ್ಟ್ರಭಾಷೆ ಎನ್ನುವ ಅರ್ಥದಲ್ಲಿ ಬರೆದುಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ