ಬೆಂಗಳೂರು, ಮಾ.30-ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್ ಯಂತ್ರಗಳ ಪ್ರಾತ್ಯಕ್ಷಿಕೆ ವೇಳೆ ರಾಯಚೂರಿನಲ್ಲಿ ಉಂಟಾಗಿದ್ದ ಗೊಂದಲದ ವರದಿ ನೀಡಿರುವ ಬಿಇಎಲ್ ಎಂಜಿನಿಯರ್ ನಿರ್ವಾಹಣೆಯಲ್ಲಿನ ವ್ಯತ್ಯಾಸದಿಂದಾಗಿ ತೊಂದರೆ ಎದುರಾಗಿತ್ತು ಎಂದು ವರದಿ ನೀಡಿದ್ದಾರೆ.
ವಿವಿ ಪ್ಯಾಟ್ನಲ್ಲಿ 64 ಚಿಹ್ನೆಗಳನ್ನೊಳಗೊಂಡ ಹೆಸರುಗಳನ್ನು ಸೇರ್ಪಡೆಗೊಳಿಸಲಾಗಿತ್ತು. ಒಂದು ಬ್ಯಾಲೆಟ್ ಶೀಟ್ನಲ್ಲಿ 16 ಹೆಸರುಗಳಿಗೆ ಅವಕಾಶವಿದೆ. ಪ್ರತಿ ವಿವಿ ಪ್ಯಾಟ್ನಲ್ಲಿ ನಾಲ್ಕು ಬ್ಯಾಲೆಟ್ ಶೀಟ್ ಅಳವಡಿಸಬಹುದಾಗಿದೆ. ಅದರಂತೆ ಹೆಸರುಗಳನ್ನು ಸೇರ್ಪಡೆಗೊಳಿಸಲಾಗಿತ್ತು.
ನಿರ್ವಹಣೆಯಲ್ಲಿ ವ್ಯತ್ಯಾಸವಾಗಿದ್ದರಿಂದ ಒಂದಿಷ್ಟು ಗೊಂದಲ ಉಂಟಾಗಿತ್ತು ಎಂದು ವರದಿಹೇಳಿದೆ.
ಬೆಂಗಳೂರು, ಮಾ.30-ಚುನಾವಣಾ ವೇಳಾಪಟ್ಟಿ ಪ್ರಕಟವಾದ ನಂತರ ಚುನಾವಣೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುವ ಯಾವುದೇ ಅಧಿಕಾರಿ ಮತ್ತು ನೌಕರರಿಗೆ ರಜೆ ಇರುವುದಿಲ್ಲ. ಈ ಸಂಬಂಧ ಸುತ್ತೋಲೆ ಹೊರಡಿಸುವುದಾಗಿ ರಾಜ್ಯ ಮುಖ್ಯಚುನಾವಣಾಧಿಕಾರಿ ಸಂಜೀವ್ಕುಮಾರ್ ತಿಳಿಸಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಹೇಳಿದರು.
ಇಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರನ್ನು ಅಶೋಕ್ ಅವರು ಭೇಟಿ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಂದಾಯ, ಪೆÇಲೀಸ್, ಸಾರಿಗೆ ಇಲಾಖೆ ಸೇರಿದಂತೆ ಚುನಾವಣಾ ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ, ಸಿಬ್ಬಂದಿಗಳಿಗೆ ರಜೆ ಇರುವುದಿಲ್ಲ. ಈ ಸಂಬಂಧ ಸುತ್ತೋಲೆ ಹೊರಡಿಸಲಿರುವುದಾಗಿ ಹೇಳಿದ್ದಾರೆ ಎಂದರು.
ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಸಭೆ ಮತ್ತು ರ್ಯಾಲಿ ನಡೆಸಲು ಏಕಗವಾಕ್ಷಿ ಮೂಲಕ ಅನುಮತಿ ನೀಡಬೇಕೆಂದು ಮನವಿ ಮಾಡಲಾಗಿದೆ. ಈ ಸಂಬಂಧ ಎರಡು ಬಾರಿ ಸಭೆ ನಡೆಸಿ ಕಾನೂನು ರೀತಿಯಲ್ಲಿ ರಾಜಕೀಯ ಪಕ್ಷಗಳಿಗೆ ಅವಕಾಶ ಕಲ್ಪಿಸುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಬೆಂಗಳೂರು ಸೇರಿದಂತೆ ರಾಜ್ಯದ 8 ವಿಧಾನಸಭಾ ಕ್ಷೇತ್ರಗಳಲ್ಲಿ ವಿದೇಶೀಯರ ಹೆಸರು ಮತದಾನ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಅದನ್ನು ಕೈಬಿಡಬೇಕೆಂದು ಕೋರಲಾಗಿದೆ ಎಂದು ತಿಳಿಸಿದರು.
ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ನಂತರವೂ ಸರ್ಕಾರದ ಯೋಜನೆಗಳಿಗೆ ಸಂಬಂಧಿಸಿದ ಜಾಹೀರಾತು ಫಲಕಗಳು ಎಲ್ಲೆಡೆ ರಾರಾಜಿಸುತ್ತಿವೆ. ಅದನ್ನು ತೆರವುಗೊಳಿಸುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು.