ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಜನಜಂಗುಳಿ:

ನವದೆಹಲಿ, ಮಾ.30- ರಾಜಧಾನಿ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ನಿನ್ನೆ ಸಂಜೆ ವಾರಾಂತ್ಯದ ಪ್ರಯಾಣಿಕರ ವಿಪರೀತ
ಜನಜಂಗುಳಿಯಿಂದ ಭಾರೀ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ಬ್ಯಾಗೇಜ್ ನಿರ್ವಹಣಾ ವ್ಯವಸ್ಥೆಯಲ್ಲಿ ವಿಫಲವಾದ ಕಾರಣ ಸಾವಿರಾರು ಬ್ಯಾಗ್‍ಗಳು ಅದಲುಬದಲಾಗಿ(ಅನೇಕ ನಾಪತ್ತೆಯಾಗಿ) ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿತು. ಇದರಿಂದ ತೀವ್ರ ಅತಂತ್ರಕ್ಕೆ ಸಿಲುಕಿದ ಪ್ರಯಾಣಿಕರು ಏರ್‍ಪೆÇೀರ್ಟ್ ಸಿಬ್ಬಂದಿಗೆ ಹಿಡಿಶಾಪ ಹಾಕಿದರು.
ಪ್ರಯಾಣಿಕರು ಇತ್ತೀಚೆಗೆ ತಮ್ಮ ಬ್ಯಾಗ್‍ಗಳಲ್ಲಿ ಪವರ್ ಬ್ಯಾಂಕ್‍ಗಳು, ಲೈಟರ್‍ಗಳಂಥ ಅಪಾಯಕಾರಿ ವಸ್ತುಗಳನ್ನು ಒಯ್ಯುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದ ವಿಮಾನದೊಳಗೆ ಬೆಂಕಿ ಕಾಣಿಸಿಕೊಂಡಿರುವ ಘಟನೆಗಳು ಮರುಕಳಿಸಿವೆ. ಅವುಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡುವುದು ಅನಿವಾರ್ಯ. ಇಂಥ ಅಪಾಯಕಾರಿ ಸರಕುಗಳಿಂದಲೇ ಈ ಗೊಂಡಲ ಉಂಟಾಗಿದೆ ಎಂದು ವಿಮಾನನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.
ಗುರುವಾರದಿಂದ ಸರಣಿ ರಜೆ ಇರುವ ಕಾರಣ ಭಾರೀ ಸಂಖ್ಯೆ ಪ್ರಯಾಣಿಕರು ವಿಮಾನನಿಲ್ದಾಣದಲ್ಲಿದ್ದರು. ಅವರೆಲ್ಲರ ಲಗೇಜ್ ಮತ್ತು ಸರಕುಗಳನ್ನು ತಪಾಸಣೆ ಮಾಡುವ ಸಂದರ್ಭದಲ್ಲಿ ಸಹಸ್ರಾರು ಬ್ಯಾಗ್‍ಗಳು ಅದಲುಬದಲಾದವು. ಅನೇಕ ಚೀಲಗಳು ನಾಪತ್ತೆಯಾಗಿ ಒಂದೆಡೆ ಪ್ರಯಾಣಿಕರು ಪರದಾಡಿದರೆ, ಮತ್ತೊಂದೆಡೆ ಗೊಂದಲ ನಿವಾರಿಸಲು ಏರ್‍ಪೆÇೀರ್ಟ್ ಅಧಿಕಾರಿಗಳು ಹೈರಾಣಾದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ