ಶತ್ರುಗಳ ಎದೆ ಸೀಳಬೇಕಾದ ಯೋಧರು ಕ್ಷುಲ್ಲಕ ಕಾರಣಕ್ಕೆ ಸಹೋದ್ಯೋಗಿಯನ್ನು ಇರಿದು ಕೊಲೆ:

ಬೆಂಗಳೂರು, ಮಾ.30- ಶತ್ರುಗಳ ಎದೆ ಸೀಳಬೇಕಾದ ಯೋಧರು ಕ್ಷುಲ್ಲಕ ಕಾರಣಕ್ಕೆ ಸೇನಾ ನೆಲೆಯಲ್ಲಿ ತಮ್ಮ ಸಹೋದ್ಯೋಗಿ ಸೈನಿಕನನ್ನು ಇರಿದು ಕೊಂದು ಶವವನ್ನು ಸುಟ್ಟು ಹಾಕಿರುವ ನಿರ್ದಯಿ ಘಟನೆ ವಿವೇಕನಗರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಹೋದ್ಯೋಗಿಗಳಿಂದಲೇ ಕೊಲೆಯಾದ ಯೋಧನನ್ನು ಉತ್ತರ ಪ್ರದೇಶ ಮೂಲದ ಪಂಕಜ್ (26) ಎಂದು ಗುರುತಿಸಲಾಗಿದೆ. ಆಂಧ್ರಪ್ರದೇಶ ಮೂಲದ ಮುರಳಿ ಕೃಷ್ಣ ಮತ್ತು ಧನರಾಜ್ ಕೊಲೆ ಆರೋಪಿಗಳು.
ಕಾರಣವೇನು: ವಿವೇಕನಗರ ಠಾಣಾ ವ್ಯಾಪ್ತಿಯಲ್ಲಿರುವ ಎಎಸ್‍ಸಿ ಸೇನಾ ನೆಲೆಯಲ್ಲಿ ಪಂಕಜ್ , ಧನರಾಜ್ ಮತ್ತು ಮುರಳಿಕೃಷ್ಣ ಯೋಧರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಗುರುತಿನ ಚೀಟಿ ವಿಚಾರದಲ್ಲಿ ಪಂಕಜ್ ಮತ್ತು ಮುರಳಿಕೃಷ್ಣ ಅವರ ನಡುವೆ ಜಗಳವಾಗಿತ್ತು.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಮುರಳಿಕೃಷ್ಣ ತನ್ನ ಮತ್ತೊಬ್ಬ ಸಹೋದ್ಯೋಗಿ ಧನರಾಜ್ ಅವರೊಂದಿಗೆ ಪಂಕಜ್‍ನನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದರು. ಅಂದುಕೊಂಡಂತೆ ಕಳೆದ 23ರಂದು ಏಕಾಏಕಿ ರೂಮಿಗೆ ಬಂದ ಮುರಳಿಕೃಷ್ಣ ಮತ್ತು ಧನರಾಜ್ ಅವರು ನಿದ್ರಿಸುತ್ತಿದ್ದ ಪಂಕಜ್‍ನ ಕುತ್ತಿಗೆಗೆ ಹಗ್ಗದಿಂದ ಬಿಗಿದು ಉಸಿರುಗಟ್ಟಿಸಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ.
ನಂತರ ಶವವನ್ನು ಪೆಟ್ಟಿಗೆಯೊಳಗೆ ಹಾಕಿ ಕ್ಯಾಂಪಸ್‍ನ ಮೂಲೆಗೆ ಸಾಗಿಸಿ ಸುಟ್ಟು ಹಾಕಿ ಏನೂ ತಿಳಿಯದವರಂತೆ ನಟಿಸುತ್ತಿದ್ದರು.
ಕೊಲೆ ರಹಸ್ಯ ಬಯಲಾದದ್ದು ಹೇಗೆ?: ಸೇನಾ ನೆಲೆಯ ಆವರಣದಲ್ಲಿ ಅಪರಿಚಿತ ಶವ ಪತ್ತೆಯಾದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ವಿವೇಕನಗರ ಪೆÇಲೀಸರಿಗೆ ಕೊಲೆಯಾಗಿರುವುದು ಯೋಧನೇ ಎಂಬ ವಿಚಾರ ಬೆಚ್ಚಿ ಬೀಳಿಸಿತ್ತು.
ಪತ್ತೆಯಾದ ಅಪರಿಚಿತ ಶವ ಎಎಸ್‍ಸಿ ಸೆಂಟರ್‍ನ ಯೋಧ ಪಂಕಜ್‍ನದ್ದು ಎಂದು ಪತ್ತೆಯಾದ ಕೂಡಲೇ ಕಾರ್ಯಾಚರಣೆಗೆ ಇಳಿದು ಹಂತಕರಾದ ಮುರಳಿ ಕೃಷ್ಣ ಮತ್ತು ಧನರಾಜ್ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕೊಲೆ ರಹಸ್ಯ ಬಯಲಾಗಿದೆ.
ಮೇಲ್ನೋಟಕ್ಕೆ ಐಡಿ ಕಾರ್ಡ್ ವಿಚಾರದಲ್ಲಿ ಮುರಳಿ ಕೃಷ್ಣ ಮತ್ತು ಪಂಕಜ್ ನಡುವೆ ಜಗಳ ನಡೆದಿತ್ತು. ಈ ವಿಷಯವನ್ನೇ ಮನಸ್ಸಿನಲ್ಲಿಟ್ಟುಕೊಂಡು ತನ್ನ ರಾಜ್ಯದವರೇ ಆದ ಸಹೋದ್ಯೋಗಿ ಧನರಾಜ್ ಅವರ ನೆರವಿನೊಂದಿಗೆ ಮುರಳಿ ಕೃಷ್ಣ ಕೊಲೆ ಮಾಡಿರಬಹುದು ಎಂದು ಕೇಂದ್ರ ವಿಭಾಗದ ಡಿಸಿಪಿ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ