ಈ ಕೋಳಿಗೆ ತಲೆಯೇ ಇಲ್ಲ, ಆದರೂ ಜೀವಿಸುತ್ತಿದೆ!

ಲಂಡನ್: ಥಾಯ್ ಲ್ಯಾಂಡ್ ನಲ್ಲಿ ಕೋಳಿಯೊಂದು ಒಂದು ವಾರದಿಂದ ತಲೆ ಇಲ್ಲದೆಯೇ ಜೀವಿಸುತ್ತಿದೆ. ರಚ್ಚಬುರಿ ರಾಜ್ಯದಲ್ಲಿರುವ ಈ ಕೋಳಿಯನ್ನು ಪಶುವೈದ್ಯೆರೊಬ್ಬರು ಸಂರಕ್ಷಿಸುತ್ತಿದ್ದಾರೆ.

ಕೋಳಿಯ ಕತ್ತಿನ ಕೆಳ ಭಾಗದಲ್ಲಿ ಗಂಟಲಿನೊಳಗೆ ಆಹಾರ ಹಾಕಿ… ಯಾಂಟಿಬಯಾಟಿಕ್ಸ್ ಕೊಟ್ಟು ಪೋಷಣೆ ಮಾಡುತ್ತಿದ್ದಾರೆ. ತಲೆ ಇಲ್ಲದಿದ್ದರೂ ಈ ಕೋಳಿ ಆತಂಕಕ್ಕೊಳಗಾಗಿಲ್ಲ. ಚೆನ್ನಾಗಿಯೇ ಸ್ಪಂದಿಸುತ್ತಿದೆ. ಇದು ನಿಜವಾಗಿಯೂ ಧೈರ್ಯ ಇರುವ ಕೋಳಿ ಎಂದು ಪಶುವೈದ್ಯೆ ಪ್ರಶಂಸಿಸಿದ್ದಾರೆ.

ಯಾವುದಾದರು ಇತರೆ ಪ್ರಾಣಿಯ ದಾಳಿಯಿಂದ ಈಗಾಗಿರಬಹುದು ಎಂದು ಸ್ಥಳೀಯರು ಭಾವಿಸುತ್ತಿದ್ದಾರೆ.

ತಲೆ ಇಲ್ಲದೇ 18 ತಿಂಗಳು ಬದುಕಿತ್ತು ಮೊತ್ತೊಂದು ಕೋಳಿ!

ಕೋಳಿ ತಲೆ ಇಲ್ಲದೇ ಬದುಕಿರೋದು ಇದೇ ಮೊದಲಲ್ಲ. ಈ ಹಿಂದೆ ಅಂದರೆ 1945-1947ರ ಸಮಯದಲ್ಲಿ ಅಮೆರಿಕಾದಲ್ಲಿ ಶಿರಚ್ಛೇದನಗೊಂಡ ಕೋಳಿಯೊಂದು 18 ತಿಂಗಳು ಜೀವಿಸಿ ದಾಖಲೆ ಮಾಡಿದ ವಿಷಯ ಈ ಸಂದರ್ಭದಲ್ಲಿ ಗಮನಾರ್ಹ.. ಅಂದು ಬದುಕಿದ್ದ ಕೋಳಿಯ ಭಾವ ಚಿತ್ರವನ್ನು ಇಂದಿಗೂ ಸಂಗ್ರಹಿಸಿಡಲಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ