
ಬೆಂಗಳೂರು, ಮಾ.30- ಹುಡುಗಿಯ ವಿಚಾರವಾಗಿ ಜಗಳ ನಡೆದು ಯುವಕನೊಬ್ಬನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ಚಂದ್ರಾಲೇಔಟ್
ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಂಜುನಾಥ್ (18) ಗಾಯಗೊಂಡಿರುವ ಯುವಕ. ಈತ ಗಾರೆಕೆಲಸಗಾರನಾಗಿದ್ದು, ನಿನ್ನೆ ಸಂಜೆ ಸಿದ್ದಗಂಗಾ ಶಾಲೆ ಸಮೀಪ ಹುಡುಗಿ ವಿಚಾರವಾಗಿ ಇಬ್ಬರು ಹುಡುಗರೊಂದಿಗೆ ಜಗಳವಾಗಿದೆ. ಈ ವೇಳೆ ಇಬ್ಬರು ಆರೋಪಿಗಳು ಚಾಕುವಿನಿಂದ ಮಂಜುನಾಥನ ಎದೆ, ಕೈ-ಕಾಲಿಗೆ ಇರಿದು ಪರಾರಿಯಾಗಿದ್ದಾರೆ.
ತಕ್ಷಣ ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಚಂದ್ರಾಲೇಔಟ್ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.