
ನವದೆಹಲಿ, ಮಾ.30-ಭ್ರಷ್ಟಾಚಾರದಲ್ಲಿ ತೊಡಗಿರುವ ಸರ್ಕಾರಿ ಅಧಿಕಾರಿಗಳಿಗೆ ಪಾಸ್ಪೆÇೀರ್ಟ್ ನೀಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಲಂಚಾವತಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ. ಭ್ರಷ್ಟಾಚಾರ, ಲಂಚ ಪ್ರಕರಣಗಳಲ್ಲಿ ತನಿಖೆಗೆ ಒಳಗಾದ, ಶಿಕ್ಷೆಗೆ ಗುರಿಯಾದ ಅಥವಾ ಸರ್ಕಾರಿ ಸಂಸ್ಥೆಯೊಂದರಿಂದ ಪ್ರಾಥಮಿಕ ತನಿಖೆ ನಂತರ ಎಫ್ಐಆರ್ ಎದುರಿಸುತ್ತಿರುವ ಅಧಿಕಾರಿಗಳಿಗೆ ಪಾಸ್ಪೆÇೀರ್ಟ್ ನೀಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಹೊಸ ಮಾರ್ಗಸೂಚಿಗಳನ್ನು ಸರ್ಕಾರ ಹೊರಡಿಸಿದೆ. ಪಾಸ್ಪೆÇೀರ್ಟ್ ಮಂಜೂರು ಮಾಡಲು ಅಗತ್ಯವಾದ ವಿಜಿಲೆನ್ಸ್ ಕ್ಲಿಯೆರೆನ್ಸ್ (ವಿಚಕ್ಷಣ ಸಂಸ್ಥೆ ನೀಡುವ ಮಂಜೂರು ಪತ್ರ) ದೃಢೀಕರಣವನ್ನು ಇಂಥ ಅಧಿಕಾರಿಗಳಿಗೆ ನೀಡಲಾಗುವುದಿಲ್ಲ.