ಹಾಸನ:ಮಾ-30: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಯಾವ ಕಾರಣಕ್ಕೂ ಸ್ಪರ್ಧಿಸುವುದಿಲ್ಲ. ವ್ಹೀಲ್ಚೇರ್ನಲ್ಲಿ ಸಂಸತ್ಗೆ ಹೋಗಲು ಇಷ್ಟಪಡುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ಹಾಸನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನನ್ನ ಹೊರತಾಗಿ ಯಾರಾದರೂ ಸ್ಪರ್ಧಿಸಿದರೆ ಸ್ವಾಗತ. ಇಲ್ಲದಿದ್ದರೆ ಮೊಮ್ಮಗ ಪ್ರಜ್ವಲ್ನನ್ನು ನಿಲ್ಲಿಸುತ್ತೇನೆ. ಅವನನ್ನು ಲೋಕಸಭೆಗೆ ಕಳಿಸಬೇಕು ಎಂಬ ಆಸೆ ಇದೆ, ಪ್ರಜ್ವಲ್ ವಿದ್ಯಾವಂತ. ಕೊಂಚ ದುಡುಕು ಬುದ್ಧಿ ಅಷ್ಟೇ. ಅವನನ್ನೇ ಮಗನೆಂದು ತಿಳಿದು ಗೆಲ್ಲಿಸಬೇಕು ಎಂದರು.
ಈ ಬಾರಿ ಬಿಜೆಪಿ ಬಿಟ್ಟು ಸರ್ಕಾರ ರಚನೆ ಮಾಡಲೇಬೇಕು ಎಂದು ನಿರ್ಧಾರ ಮಾಡಿದ್ದೇನೆ. 113 ಸ್ಥಾನ ಗೆಲ್ಲಲೇ ಬೇಕು ಎಂಬುದು ನನ್ನ ಗುರಿ. ಇನ್ನು 45 ದಿನಗಳು ಬಾಕಿ ಇದ್ದು, ವಿಶ್ರಾಂತಿ ಪಡೆಯದೆ ರಾಜ್ಯ ಸುತ್ತುತ್ತೇನೆ ಎಂದು ಹೇಳಿದ್ದಾರೆ.
ಪಕ್ಷ ತೊರೆಯುವವರ ಬಗ್ಗೆ ನಾವೆಂದೂ ತಲೆ ಕೆಡಿಸಿಕೊಳ್ಳುವುದಿಲ್ಲ. ಕುಮಾರಸ್ವಾಮಿಯವರನ್ನು ಸಿಎಂ ಮಾಡಬೇಕು ಎಂದು ನಾನು ಹೇಳುತ್ತಿಲ್ಲ. ಜನರೇ ಮಾತನಾಡಿಕೊಳ್ಳುತ್ತಿದ್ದಾರೆ ಎಂದರು.
ಇದೇವೇಳೆ ಮುಖ್ಯಕಾರ್ಯದರ್ಶಿ ರತ್ನಪ್ರಭಾ ಮುಂದುವರಿಕೆ ವಿಚಾರವಾಗಿ ಮಾತನಾಡಿದ ದೇವೇಗೌಡರು, ಚುನಾವಣೆಯಲ್ಲಿ ಅವರು ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕು. ಇಲ್ಲದಿದ್ದರೆ ಆಯೋಗಕ್ಕೆ ದೂರು ನೀಡಲಾಗುವುದು ಎಂದರು.
assembly election 2018,H D Deve gowda,Hasana