ಕಾಮನ್‍ವೆಲ್ತ್ ಗೇಮ್ಸ್‍ಗಾಗಿ ನಕಲಿ ಪತ್ರಕರ್ತರನ್ನು ಕಳ್ಳಸಾಗಣೆ ಪತ್ತೆ:

ಮೆಲ್ಬೊರ್ನ್, ಮಾ.29-ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಕಾಮನ್‍ವೆಲ್ತ್ ಗೇಮ್ಸ್‍ಗಾಗಿ ನಕಲಿ ಪತ್ರಕರ್ತರನ್ನು ಕಳ್ಳಸಾಗಣೆ ಮಾಡುವ ಜಾಲವೊಂದನ್ನು ಪೆÇಲೀಸರು ಪತ್ತೆ ಮಾಡಿದ್ದಾರೆ. ಈ ಸಂಬಂಧ ಆಸ್ಟ್ರೇಲಿಯಾದ ಭಾರತೀಯ ಪತ್ರಕರ್ತ ಸೇರಿದಂತೆ ಒಂಭತ್ತು ಜನರನ್ನು ಬಿಸ್ಬೇನ್ ಏರ್‍ಪೆÇೀರ್ಟ್‍ನಲ್ಲಿ ಬಂಧಿಸಲಾಗಿದೆ.
ಬಿಸ್ಬೇನ್ ವಿಮಾನನಿಲ್ದಾಣದಲ್ಲಿ ನಿನ್ನೆ ಪತ್ರಕರ್ತ ರಾಜೇಶ್ ಕುಮಾರ್ ಶರ್ಮ(46) ಹಾಗೂ ಎಂಟು ನಕಲಿ ಪತ್ರಕರ್ತರನ್ನು ಬಂಧಿಸಲಾಗಿದೆ.
ಖಚಿತ ಸುಳಿವಿನ ಮೇಲೆ ಇವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ ಎಂಟು ಜನರ ಬಳಿ ಇರುವ ಮಾದ್ಯಮ ಪ್ರತಿನಿಧಿ ಮಾನ್ಯತೆ ನಕಲಿ ಎಂಬುದು ಪತ್ತೆಯಾಯಿತು. ಇವರನ್ನು ಕ್ರೀಡಾ ಪತ್ರಕರ್ತರ ಸೋಗಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ರಾಜೇಶ್ ಆಸ್ಟ್ರೇಲಿಯಾಗೆ ಕರೆಸಿಕೊಂಡಿದ್ದ ಎಂದು ಆಸ್ಟ್ರೇಲಿಯಾ ಗಡಿ ಪಡೆ(ಎಬಿಎಫ್) ಆರೋಪಿಸಿದೆ. ಈ ಒಂಭತ್ತು ಜನರನ್ನು ಬಂಧಿಸಿ ಕೂಲಂಕಷ ವಿಚಾರಣೆಗ ಒಳಪಡಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ