ಐಸಿಐಸಿಐ ಬ್ಯಾಂಕ್‌ಗೆ  59 ಕೋಟಿ ದಂಡ ವಿಧಿಸಿದ ಆರ್ ಬಿಐ

ಮುಂಬೈ :ಮಾ-29: ಸಾಲಪತ್ರಗಳ ಮಾರಾಟ ನಿಯಮ ಉಲ್ಲಂಘನೆ ಪ್ರಕರಣ ಸಂಬಂಧ ಭಾರತೀಯ ರಿಸರ್ವ್‌ ಬ್ಯಾಂಕ್‌, ಖಾಸಗಿ ವಲಯದ ಅತಿದೊಡ್ಡ ಹಣಕಾಸು ಸಂಸ್ಥೆಯಾಗಿರುವ ಐಸಿಐಸಿಐ ಬ್ಯಾಂಕ್‌ಗೆ  59 ಕೋಟಿ ದಂಡ ವಿಧಿಸಿದೆ.

ಒಂದು ನಿಗದಿತ ಅವಧಿಗೆ ಮೀಸಲಿರಿಸಿದ ಸಾಲಪತ್ರಗಳ ನೇರ ಮಾರಾಟಕ್ಕೆ ಸಂಬಂಧಿಸಿದಂತೆ ಇರುವ ನಿಯಮಗಳನ್ನು ಐಸಿಐಸಿಐ ಬ್ಯಾಂಕ್‌ ಪಾಲನೆ ಮಾಡಿಲ್ಲ. ಈ ಕಾರಣಕ್ಕಾಗಿ ಮಾರ್ಚ್‌ 26ರಂದು ದಂಡ ವಿಧಿಸಿ, ಆದೇಶ ಹೊರಡಿಸಲಾಗಿದೆ ಎಂದು ಆರ್‌ಬಿಐನ ಪ್ರಕಟಣೆ ತಿಳಿಸಿದೆ.

1949ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಅನ್ವಯ ಆರ್‌ಬಿಐ ನೀಡಿರುವ ನಿರ್ದೇಶನಗಳನ್ನು ಪಾಲಿಸಲು ವಿಫಲವಾಗುವ ಬ್ಯಾಂಕ್‌ಗಳ ವಿರುದ್ಧ ಕ್ರಮ ಜರುಗಿಸುವ ಅಧಿಕಾರವನ್ನು ಆರ್‌ಬಿಐ ಹೊಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ