ಬಿಜೆಪಿ ಅಂದ್ರೆ ಬುರುಡೆ ಜನರ ಪಕ್ಷ: ಗೃಹ ಸಚಿವ ರಾಮಲಿಂಗಾರೆಡ್ಡಿ ವ್ಯಂಗ್ಯ

ಮಹದೇವಪುರ, ಮಾ.29- ಬಿಜೆಪಿ ಅಂದ್ರೆ ಬುರುಡೆ ಜನರ ಪಕ್ಷ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹರಿಹಾಯ್ದಿದ್ದಾರೆ.
ಕ್ಷೇತ್ರದ ಆವಲಹಳ್ಳಿಯಿಂದ ಕೋನದಾಸಪುರ ವರೆಗೆ ನಮ್ಮ ಬೆಂಗಳೂರು ನಮ್ಮ ಹೆಮ್ಮೆ ಪಾದಯಾತ್ರೆ ನಡೆಸಿ ಕೋನದಾಸಪುರದಲ್ಲಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಮೂರು ಜನ ಮುಖ್ಯಮಂತ್ರಿಗಳಾಗಿದ್ದರು. ಒಬ್ಬರು ಜೈಲಿಗೆ ಹೋಗಿ ಬಂದ್ರು, ಬೆಂಗಳೂರಿನಲ್ಲಿ ಅವರದ್ದೇ ಅಧಿಕಾರ ಇದ್ದಾಗ ಬೆಂಗಳೂರಿನ ಪ್ರಮುಖ ಕಟ್ಟಡಗಳನ್ನು ಅಡವಿಟ್ಟು, 8 ಸಾವಿರ ಕೋಟಿ ಸಾಲಿ ಇಟ್ಟು ಹೋದ್ರು. ಈ ಸಾಲವನ್ನು ತೀರಿಸುತ್ತಾ ಕಟ್ಟಡಗಳನ್ನು ಬಿಡಿಸಿಕೊಳ್ಳುವ ಕೆಲಸ ಕಾಂಗ್ರೆಸ್ ಮಾಡಿದೆ.

ಇದೀಗ ಇವರಿಂದಲೇ ಬೆಂಗಳೂರು ರಕ್ಷಿಸಿ ಪಾದಯಾತ್ರೆ ವಿಪಾರ್ಯಾಸದ ಸಂಗತಿ ಎಂದರು.
ಸುಳ್ಳು ಹೇಳೋದ್ರಲ್ಲಿ ಮೋದಿ ನಂ.1, ಅಮಿತ್ ಷಾ, ಯಡಿಯೂರಪ್ಪ, ಸದಾನಂದಗೌಡ, ಅನಂತ್‍ಕುಮಾರ್ ಎಲ್ಲರೂ ಬುರುಡೆ ಬಿಡುವವರೆ ಎಂದು ವ್ಯಂಗ್ಯವಾಡಿದರು.
ಮಹದೇವಪುರ ಕ್ಷೇತ್ರಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್ ಅವರೇ ಕಾಂಗ್ರೆಸ್ ಅಭ್ಯರ್ಥಿ. ಅವರಿಗೆ ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಲಾಗುವುದಿಲ್ಲ ಎಂದು ಹೇಳಿದರು.

ಕೇಂದ್ರ ಮಾಜಿ ಸಚಿವ ಸಿಎಂ ಇಬ್ರಾಹಿಂ ಮಾತನಾಡಿ, ಭಾರತದಲ್ಲಿ ಹಿಂದೂ-ಮುಸ್ಲಿಂ ಅಣ್ಣತಮ್ಮಂದಿರಂತೆ ಕೋಮು ಗಲಭೆ ಸೃಷ್ಟಿಸಲು ನೋಡಬೇಡಿ ಎಂದರು.
ವಿಧಾನಪರಿಷತ್ ಸದಸ್ಯ ನಾರಾಯಣಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್, ಮಾಜಿ ಸಚಿವೆ ರಾಣಿ ಸತೀಶ್, ಪಾಲಿಕೆ ಸದಸ್ಯರಾದ ಮಾರತ್ತಹಳ್ಳಿ ರಮೇಶ್, ಹರಿಪ್ರಸಾದ್, ಜಿಪಂ ಸದಸ್ಯರಾದ ಕೆಂಪರಾಜು, ವೇದಶ್ರೀ ಲಕ್ಷ್ಮಿನಾರಾಯಣ್, ಬ್ಲಾಕ್ ಅಧ್ಯಕ್ಷ ಜಯರಾಂರೆಡ್ಡಿ, ಮಂಡೂರು ಅಧ್ಯಕ್ಷ ಜನಾರ್ಧನ್‍ಗೌಡ ಮುಖಂಡರಾದ ಚಿಕ್ಕಮುನಿಯಪ್ಪ, ಅನಿಲ್, ರಮೇಶ್, ನಾಗಪ್ಪ, ಎಂಸಿಸಿ ರವಿ, ವರ್ತೂರು ಸುರೇಶ್ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ