
ಕೋಲಾರ:ಮಾ-29: ಕೋಲಾರದ ಮಾಲೂರು ಕೈಗಾರಿಕಾ ಪ್ರದೇಶದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಇಲ್ಲಿನ ಬನಶಂಕರಿ ಕೆಮಿಕಲ್ಫ್ಯಾಕ್ಟರಿಯಲ್ಲಿ ಬೆಂಕಿ ಅನಾಹುತ ಸಂಭವಿಸಿದೆ.
ಮೊದಲಿಗೆ ಶಾರ್ಟ್ ಸರ್ಕ್ಯೂಟ್ನಿಂದಾಗಿ ಆಯಿಲ್ ಫ್ಯಾಕ್ಟರಿಯಲ್ಲಿ ಕಾಣಿಸಿಕೊಂಡಿ ಬೆಂಕಿ ಕೆನ್ನಾಲಿಗೆ ಪಕ್ಕದಲ್ಲಿರುವ ಶ್ರೀರಾಮ ಪ್ಲೈ ವುಡ್, ಸಾಯಿನಾಥ ಸ್ಟೀಲ್ ಕಾರ್ಖಾನೆಗೂ ವ್ಯಾಪಿಸಿದೆ. ಹತ್ತಾರು ಕಾರ್ಮಿಕರು ಕಾರ್ಖಾನೆ ಒಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸುತ್ತಮುತ್ತಲು ದಟ್ಟ ಹೊಗೆ ಆವರಿಸಿದ್ದು, ಜನತೆ ಆತಂಕಕ್ಕೀಡಾಗಿದ್ದಾರೆ.
ಬೆಂಕಿಗೆ ಆಯಿಲ್ ಡ್ರಮ್ ಹಾಗೂ ಸಿಲಿಂಡರ್ಗಳು ಬ್ಲಾಸ್ಟ್ ಆಗಿದ್ದು, ಅಕ್ಕಪಕ್ಕದ ಕಾರ್ಖಾನೆಗಳಿಗೂ ಬೆಂಕಿ ಹರಡ್ತ್ತಿದೆ. 50 ಕ್ಕೂ ಹೆಚ್ಚು ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.
5 ಕ್ಕೂ ಹೆಚ್ಚು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
Massive fire, kolara,malur Factory