ಗುಜರಾತ್‍ನ ಕಚ್‍ನಲ್ಲಿ ಲಘು ಭೂಕಂಪ:

ಕಚ್, ಮಾ.29-ಗುಜರಾತ್‍ನ ಕಚ್ ಜಿಲ್ಲೆಯ ಬಚಾವು ಪ್ರದೇಶದಲ್ಲಿ ಇಂದು ಮುಂಜಾನೆ ಲಘು ಭೂಕಂಪ ಸಂಭವಿಸಿದೆ. 4ರ ನಸುಕಿನಲ್ಲಿ ಸಂಭವಿಸಿದ ಭೂಕಂಪದ ತೀವ್ರತೆ 4.2ರಷ್ಟಿತ್ತು. ಭೂಕಂಪದಿಂದ ಯಾವುದೇ ಸಾವು-ನೋವು ಅಥವಾ ಆಸ್ತಿ-ಪಾಸ್ತಿ ನಷ್ಟದ ಬಗ್ಗೆ ವರದಿಯಾಗಿಲ್ಲ.  ಬಚಾವು ಪ್ರದೇಶದಲ್ಲಿ ಪೂರ್ವ-ಆಗ್ನೇಯ ದಿಕ್ಕಿನ 8 ಕಿ.ಮೀ. ದೂರದಲ್ಲಿ ಭೂಕಂಪದ ಕೇಂದ್ರ ಬಿಂದು ದಾಖಲಾಗಿತ್ತು ಎಂದು ಅಮೆರಿಕದ ಯುಎಸ್‍ಜಿಎಸ್ ಕೇಂದ್ರ ತಿಳಿಸಿದೆ. ಭೂಕಂಪವು ಲಘು ತೀವ್ರತೆ ಹೊಂದಿತ್ತು ಎಂದು ಹವಾಮಾನ ಇಲಾಖೆ ಹೇಳಿದೆ. ಕಳೆದ ವರ್ಷ ಜ.23ರಂದು ಗುಜರಾತ್‍ನ ಜುನಗಢ್‍ನಲ್ಲಿ 3.6 ತೀವ್ರತೆಯ ಭೂಕಂಪ ಸಂಭವಿಸಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ