ಕಚ್, ಮಾ.29-ಗುಜರಾತ್ನ ಕಚ್ ಜಿಲ್ಲೆಯ ಬಚಾವು ಪ್ರದೇಶದಲ್ಲಿ ಇಂದು ಮುಂಜಾನೆ ಲಘು ಭೂಕಂಪ ಸಂಭವಿಸಿದೆ. 4ರ ನಸುಕಿನಲ್ಲಿ ಸಂಭವಿಸಿದ ಭೂಕಂಪದ ತೀವ್ರತೆ 4.2ರಷ್ಟಿತ್ತು. ಭೂಕಂಪದಿಂದ ಯಾವುದೇ ಸಾವು-ನೋವು ಅಥವಾ ಆಸ್ತಿ-ಪಾಸ್ತಿ ನಷ್ಟದ ಬಗ್ಗೆ ವರದಿಯಾಗಿಲ್ಲ. ಬಚಾವು ಪ್ರದೇಶದಲ್ಲಿ ಪೂರ್ವ-ಆಗ್ನೇಯ ದಿಕ್ಕಿನ 8 ಕಿ.ಮೀ. ದೂರದಲ್ಲಿ ಭೂಕಂಪದ ಕೇಂದ್ರ ಬಿಂದು ದಾಖಲಾಗಿತ್ತು ಎಂದು ಅಮೆರಿಕದ ಯುಎಸ್ಜಿಎಸ್ ಕೇಂದ್ರ ತಿಳಿಸಿದೆ. ಭೂಕಂಪವು ಲಘು ತೀವ್ರತೆ ಹೊಂದಿತ್ತು ಎಂದು ಹವಾಮಾನ ಇಲಾಖೆ ಹೇಳಿದೆ. ಕಳೆದ ವರ್ಷ ಜ.23ರಂದು ಗುಜರಾತ್ನ ಜುನಗಢ್ನಲ್ಲಿ 3.6 ತೀವ್ರತೆಯ ಭೂಕಂಪ ಸಂಭವಿಸಿತ್ತು.