
ವಿಶ್ವಸಂಸ್ಥೆ, ಮಾ.28-ಭಾರತ ಸೇರಿದಂತೆ ವಿಶ್ವದ ವಿವಿಧೆಡೆ ಪತ್ರಕರ್ತರ ಹತ್ಯೆಗಳು ಮತ್ತು ದಾಳಿಗಳ ಬಗ್ಗೆ ವಿಶ್ವಸಂಸ್ಥೆ ಮುಖ್ಯಸ್ಥ ಅಂಟೋನಿಯೊ ಗುಟೆರ್ರೆಸ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಬಿಹಾರ ಮತ್ತು ಮಧ್ಯಪ್ರದೇಶದಲ್ಲಿ ಇಬ್ಬರು ಪತ್ರಕರ್ತರ ಹತ್ಯೆ ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಸಂಯುಕ್ತ ರಾಷ್ಟ್ರಗಳ ಮಹಾ ಪ್ರಧಾನ ಕಾರ್ಯದರ್ಶಿಯವರು, ವಿಶ್ವದ ವಿವಿಧೆಡೆ ಮಾಧ್ಯಮ ಪ್ರತಿನಿಧಿಗಳ ಕೊಲೆ, ಹಿಂಸಾಚಾರ ಮತ್ತು ದೌರ್ಜನ್ಯ-ಕಿರುಕುಳಗಳು ನಡೆಯುತ್ತಿರುವ ಬಗ್ಗೆ ನಮಗೆ ಕಳವಳ ಇದೆ ಎಂದು ಹೇಳಿದ್ದಾರೆ.