2,500 ಕೋಟಿ ರೂ.ಗಳ ತೆರಿಗೆ ವಂಚನೆ: ಸಿಟಿಎಸ್ ಸಂಸ್ಥೆಯ ಬ್ಯಾಂಕ್ ಖಾತೆಗಳ ಮುಟ್ಟುಗೋಲು

ಚೆನ್ನೈ, ಮಾ.28-ಪ್ರತಿಷ್ಠಿತ ಕಂಪನಿಗಳ ತೆರಿಗೆ ವಂಚನೆ ಪ್ರಕರಣಗಳು ಒಂದೊಂದಾಗಿ ಬಯಲಾಗುತ್ತಿದೆ. 2,500 ಕೋಟಿ ರೂ.ಗಳ ತೆರಿಗೆ ವಂಚನೆ ಹಿನ್ನೆಲೆಯಲ್ಲಿ ಕಾಗ್ನಿಜಾಂಟ್ ಟೆಕ್ನೋಲಾಜಿಸ್ ಸೆಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಸಿಟಿಎಸ್) ಸಂಸ್ಥೆಯ ಕೆಲವು ಬ್ಯಾಂಕ್ ಖಾತೆಗಳನ್ನು ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ.
ಈ ಸಂಸ್ಥೆಯು ಲಾಭಾಂಶ ವಿತರಣಾ ತೆರಿಗೆಯನ್ನು (ಡಿವಿಡೆಂಡ್ ಡಿಸ್ಟ್ರಿಬ್ಯೂಷನ್ ಟ್ಯಾಕ್ಸ್-ಡಿಡಿಟಿ) ಸರ್ಕಾರಕ್ಕೆ ಪಾವತಿಸಬೇಕಿತ್ತು. ಇದನ್ನು ವಸೂಲಿ ಮಾಡಲು ಐಟಿ ಅಧಿಕಾರಿಗಳು ಸಿಟಿಎಸ್‍ನ ಬ್ಯಾಂಕ್ ಅಕೌಂಟ್‍ಗಳನ್ನು ಜಪ್ತಿ ಮಾಡಿದೆ.
ಆದಾಯ ತೆರಿಗೆ ಕಾಯ್ದೆ ಪ್ರಕಾರ, ಸಂಚಿತ ಲಾಭದ ಮೇಲೆ ಯಾವುದೇ ವಿತರಣೆ ಮೇಲೆ ಡಿಡಿಟಿಯನ್ನು ಪಾವತಿಸಬೇಕು. ಆದರೆ ಈ ಸಂಸ್ಥೆಯು 2016-17ನೇ ಸಾಲಿಗೆ 2,500 ಕೋಟಿ ರೂ.ಗಳ ತನಕ ಡಿಡಿಟಿಯನ್ನು ಪಾವತಿಸಿಲ್ಲ. ಪಾವತಿಯಾಗದ ಲಾಭಾಂಶ ವಿತರಣಾ ತೆರಿಗೆಯನ್ನು ವಸೂಲು ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಐಟಿ ಇಲಾಖೆಯ ಉನ್ನತಾಧಿಕಾರಿಗಳು ಹೇಳಿದ್ದಾರೆ. ಚೆನ್ನೈ ಮತ್ತು ಮುಂಬೈನಲ್ಲಿ 2,500 ಕೋಟಿ ರೂ.ಗಳವರೆಗೆ ಠೇವಣಿಗಳಿರುವ ಸಂಸ್ಥೆಯ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ