ಬೆಂಗಳೂರು, ಮಾ.28- ಅನಿವಾಸಿ ಭಾರತೀಯರೊಬ್ಬರಿಗೆ 12 ಕೋಟಿ ರೂ. ವಂಚಿಸಿರುವ ಆರೋಪದ ಮೇಲೆ ರಿಯಲ್ ಎಸ್ಟೇಟ್ ಏಜೆಂಟ್ ಒಬ್ಬರನ್ನು ಸಿಸಿಬಿ
ಪೆÇಲೀಸರು ಬಂಧಿಸಿದ್ದಾರೆ. ಮಲ್ಲೇಶ್ವರಂನ 15ನೆ ಅಡ್ಡರಸ್ತೆ ನಿವಾಸಿ, ರಿಯಲ್ ಎಸ್ಟೇಟ್ ಏಜೆಂಟ್ ಗಣೇಶ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಸಿಸಿಬಿ
ಪೆÇಲೀಸರು ತಿಳಿಸಿದ್ದಾರೆ. ಅನಿವಾಸಿ ಭಾರತೀಯ ರಾಜೇಶ್ ರಾಮಚಂದ್ರನ್ ಎಂಬುವವರು ಹಣ ತೊಡಗಿಸಿ ವಂಚನೆಗೊಳಗಾದ ಬಗ್ಗೆ ಮಲ್ಲೇಶ್ವರಂ ಪೆÇಲೀಸ್ ಠಾಣೆಗೆ ಎರಡು ದೂರು ನೀಡಿದ್ದರು.
ಒಂದು ದೂರಿನಲ್ಲಿ ಗಣೇಶ್ ವಿರುದ್ಧ ಹಾಗೂ ಮತ್ತೊಂದು ದೂರಿನಲ್ಲಿ ಗಣೇಶ್ ಹಾಗೂ ಈತನ ಪತ್ನಿ ವಿರುದ್ಧ ವಂಚನೆ ದೂರು ನೀಡಿದ್ದರು. ವಂಚನೆ ಮೊತ್ತ ಹೆಚ್ಚಿರುವ ಕಾರಣ ಈ ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿತ್ತು. ಪ್ರಕರಣಗಳ ತನಿಖೆ ನಡೆಸಿ ರಿಯಲ್ ಎಸ್ಟೇಟ್ ಏಜೆಂಟ್ ಗಣೇಶ್ನನ್ನು ಬಂಧಿಸಲಾಗಿದೆ. ಜಾಮೀನು ಪಡೆದಿರುವ ಈತನ ಪತ್ನಿ ಶ್ರೀಲತಾ ಅವರನ್ನು ಸಹ ವಿಚಾರಣೆಗೊಳಪಡಿಸಲಾಗುವುದು ಎಂದು ಸಿಸಿಬಿ ಪೆÇಲೀಸರು ತಿಳಿಸಿದ್ದಾರೆ.
ಹಲವಾರು ವರ್ಷಗಳಿಂದ ದುಬೈನಲ್ಲಿ ನೆಲೆಸಿರುವ ರಾಜೇಶ್ ರಾಮಚಂದ್ರನ್ ಅವರಿಗೆ ಗಣೇಶ್ನ ಪರಿಚಯವಾಗಿತ್ತು. ತದನಂತರ ಈತ ರಾಜೇಶ್ ಅವರಿಗೆ ತಮ್ಮ ಕಂಪೆನಿಗೆ ಪಾಲುದಾರರಾಗಿ ಹಣ ಹೂಡಿದರೆ ಹೆಚ್ಚಿನ ಲಾಭ ಕೊಡಿಸುವುದಾಗಿ ಆಸೆ ತೋರಿಸಿದ್ದರು. ಈತನ ಮಾತನ್ನು ನಂಬಿದ ರಾಜೇಶ್ ರಾಮಚಂದ್ರನ್ ಅವರು ಪಾಲುದಾರರಾಗಿ 6.63 ಕೋಟಿ ಹಣ ತೊಡಗಿಸಿದ್ದರು. ಈ ಹಣವನ್ನು ವಾಪಸ್ ನೀಡದೆ ಗಣೇಶ್ ಮತ್ತು ಈತನ ಪತ್ನಿ ಮೋಸ ಮಾಡಿದ್ದಾರೆಂದು ಮಲ್ಲೇಶ್ವರಂ ಪೆÇಲೀಸ್ ಠಾಣೆಗೆ ದೂರು ನೀಡಿದ್ದರು. ರಿಯಲ್ ಎಸ್ಟೇಟ್ ಮಾಡುತ್ತಿದ್ದೇನೆ. ಹಣ ಹೂಡಿದರೆ ಹೆಚ್ಚಿನ ಲಾಭ ಕೊಡುವುದಾಗಿ ನಂಬಿಸಿ ಅವರಿಗೆ 6.44 ಲಕ್ಷ ಹಣ ಹೂಡಿಕೆ ಮಾಡಿಸಿಕೊಂಡು ನನಗೆ ವಂಚಿಸಿದ್ದಾರೆ ಎಂದು ಗಣೇಶ್ ವಿರುದ್ಧ ಮತ್ತೊಂದು ದೂರು ನೀಡಿದ್ದಾರೆ.