
ಅಮರಾವತಿ, ಮಾ.28-ಪಾನಮತ್ತ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ತನ್ನ ಕಾರನ್ನು ತಡೆಯಲು ಬಂದ ಪೆÇಲೀಸರ ಮೇಲೆ ಕಾರು ಹತ್ತಿಸಿ ಪೌರುಷ
ತೋರಿಸಿದ್ಧಾನೆ. ಈ ಘಟನೆಯಲ್ಲಿ ಹಲವು ಪೆÇಲೀಸರಿಗೆ ಗಾಯಗಳಾಗಿವೆ.
ಆಂಧ್ರಪ್ರದೇಶದ ಪೂರ್ವ ಗೋದಾವರಿಯಲ್ಲಿ ಸಂಚಾರಿ ಪೆÇಲೀಸರು ಡ್ರಿಂಕ್ ಅಂಡ್ ಡ್ರೈವ್ ಮಹಾನುಭಾವನನ್ನು ಹಿಡಿಯಲು ಮುಂದಾಗಿದ್ದರು. ಇದೇ ಸಂದರ್ಭದಲ್ಲಿ ಆಗಲೇ ಕಂಠಮಟ್ಟ ಮದ್ಯಪಾನ ಮಾಡಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಕಾರನ್ನು ನಿಲ್ಲಿಸದೇ ತನ್ನ ವಾಹನದ ಮುಂದೆ ಇದ್ದ ಪೆÇಲೀಸರ ಮೇಲೇ ಕಾರು ನುಗ್ಗಿಸಿದ ಈ ಘಟನೆಯಲ್ಲಿ ಹಲವು ಪೆÇಲೀಸರಿಗೆ ಗಾಯಗಳಾಗಿವೆ. ಕಾಕಿನಾಡ ಜಿಲ್ಲೆಯ ಪೆÇಲೀಸ್ ಸೂಪರಿಂಟೆಂಡೆಂಟ್ ಅವರ ಕಚೇರಿ ಮುಂದೆಯೇ ಈ ಘಟನೆ ನಡೆದಿದೆ. ನಂತರ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ