ಲೋಡ್‍ಶೆಡ್ಡಿಂಗ್ ಆಗದಂತೆ ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಇಂಧನ ಸಚಿವರ ಸೂಚನೆ

 

ಬೆಂಗಳೂರು, ಮಾ 28-ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುತ್ತಿದ್ದು, ಯಾವುದೇ ಕಾರಣಕ್ಕೂ ಲೋಡ್‍ಶೆಡ್ಡಿಂಗ್ ಆಗದಂತೆ ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿದ್ಯುತ್ ಬೇಡಿಕೆ ನಿನ್ನೆ 10,777 ಮೆಗಾ ವ್ಯಾಟ್ (240 ದಶಲಕ್ಷ ಯುನಿಟ್) ಇತ್ತು. ಇದು ವಿದ್ಯುಚ್ಛಕ್ತಿ ಪ್ರಾರಂಭವಾದಾಗಿನಿಂದ ಇದುವರೆಗಿನ ಅತಿ ಹೆಚ್ಚಿನ ವಿದ್ಯುತ್ ಬೇಡಿಕೆಯಾಗಿದೆ. ಇನ್ನು ಒಂದು ಸಾವಿರ ಮೆಗಾ ವ್ಯಾಟ್‍ನಷ್ಟು ಹೆಚ್ಚಾದರೂ ನಿಭಾಯಿಸುವ ಶಕ್ತಿ ಇಂಧನ ಇಲಾಖೆಗೆ ಇದೆ ಎಂದು ಹೇಳಿದರು.
ರೈತರ ಕೃಷಿ ಪಂಪ್‍ಸೆಟ್‍ಗಳಿಗೂ ಹಗಲಿನಲ್ಲೇ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ವಿದ್ಯುತ್ ಪೂರೈಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

2013ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ರಾಜ್ಯದ ವಿದ್ಯುತ್ ಉತ್ಪಾದನಾ ಸಾಮಥ್ರ್ಯ 14,030 ಮೆಗಾವ್ಯಾಟ್‍ಗಳಷ್ಟಿತ್ತು. ಫೆಬ್ರವರಿ ಅಂತ್ಯಕ್ಕೆ 24,616 ಮೆಗಾ ವ್ಯಾಟ್‍ಗಳಿಗೆ ಹೆಚ್ಚಳವಾಗಿದೆ. ಕಳೆದ 5 ವರ್ಷಗಳಲ್ಲಿ ವಿವಿಧ ಮೂಲಗಳಿಂದ 10,586 ಮೆಗಾ ವ್ಯಾಟ್ ಉತ್ಪಾದನಾ ವಿದ್ಯುತ್ ಸಾಮಥ್ರ್ಯವನ್ನು ಹೆಚ್ಚಿಸಲಾಗಿದೆ. ಇಂಧನ ಇಲಾಖೆಯಲ್ಲಿ ನಾಡಿನ ಜನರಿಗೆ ನ್ಯಾಯ ಒದಗಿಸಿದ ಸಮಾಧಾನ, ತೃಪ್ತಿ ಇದೆ ಎಂದು ಹೇಳಿದರು.
ವಿದ್ಯುತ್ ಪ್ರಸರಣ ನಷ್ಟವನ್ನು ಶೇ.3.81 ರಿಂದ ಶೇ.3.283ಕ್ಕೆ ಹಾಗೂ ವಿದ್ಯುತ್ ವಿತರಣಾ ನಷ್ಟವನ್ನು ಶೇ.15.3 ರಿಂದ ಶೇ.13.34 ರಷ್ಟು ಇಳಿಕೆ ಮಾಡಲಾಗಿದೆ. ಇದು ದೇಶದಲ್ಲಿಯೇ ಕಡಿಮೆ ಇದೆ ಎಂದು ಹೇಳಿದರು.

ಹೊಸದಾಗಿ 149 ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪನೆ ಮಾಡಿದ್ದು, 4,004 ಕಿ.ಮೀ. ಸಕ್ರ್ಯೂಟ್ ಲೈನ್ ಸೇರ್ಪಡೆ ಮಾಡಲಾಗಿದೆ. ಒಟ್ಟು 35,903 ಕಿ.ಮೀ.ಗೆ ಹೆಚ್ಚಳ ಮಾಡಲಾಗಿದೆ. ಕೇಂದ್ರ ಸರ್ಕಾರದ ಅನುದಾನವಿಲ್ಲದೆ ರಾಜ್ಯದ ಅನುದಾನದಲ್ಲೇ ವಿದ್ಯುತ್ ಇಲಾಖೆಯಲ್ಲಿ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ದೇಶದಲ್ಲೇ ಮೊದಲು ಎನ್ನಲಾದ ಚಿಕ್ಕಬೆಟ್ಟಹಳ್ಳಿಯಲ್ಲಿ ಡಿಜಿ ಪ್ಲ್ಯಾಂಟ್, ಸಿಂಗನಾಯಕನಹಳ್ಳಿಯಲ್ಲಿ 270 ಕೆವಿಯ ಡಿಜಿ ಪ್ಲ್ಯಾಂಟ್ ಹಾಗೂ ಯುಜಿ ಕೇಬಲ್ ಅಳವಡಿಕೆ, ಜಿಗಣಿಯಿಂದ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದವರೆಗೆ ದೇಶದಲ್ಲೇ ದೊಡ್ಡದಾದ 220 ಕೆವಿ ಸಾಮಥ್ರ್ಯದ ಮನೋಪೆÇೀಲ್ ನಿರ್ಮಿಸಲಾಗಿದೆ. ಬಳ್ಳಾರಿಯಿಂದ ರಾಂಪುರದವರೆಗೆ 400 ಕೆವಿ ಸಾಮಥ್ರ್ಯದ ಮಲ್ಟಿ ಸಕ್ರ್ಯೂಟ್ ಮಾರ್ಗ, ಯರಮರಸದಿಂದ ವಸಂತ ನರಸಾಪುರದವರೆಗೆ 880 ಕಿ.ಮೀ. 400 ಕೆವಿ ಮಾರ್ಗ ನಿರ್ಮಾಣ, 400 ಕೆವಿಯ ವಿದ್ಯುತ್ ಠಾಣೆಗಳನ್ನು ದ್ವಿಗುಣಗೊಳಿಸಲಾಗಿದೆ ವಿದ್ಯುತ್ ಇಲಾಖೆ ಸಾಧನೆಗಳನ್ನು ವಿವರಿಸಿದರು.

ದೇಶದಲ್ಲೇ ಮಾದರಿಯಾದ ಪ್ರತಿ ತಾಲೂಕಿನ 20 ಕೆವಿ ಸಾಮಥ್ರ್ಯದ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡುವ ಪ್ರಕ್ರಿಯೆ 123 ತಾಲೂಕುಗಳಲ್ಲಿ ವಿವಿಧ ಹಂತದಲ್ಲಿದೆ ಎಂದು ಹೇಳಿದರು.

ಇಡೀ ರಾಜ್ಯದಲ್ಲಿ 21 ಸಾವಿರ ಸಿಬ್ಬಂದಿ ನೇಮಕ ಮಾಡಲಾಗಿದೆ. 5 ಲಕ್ಷ ಅಕ್ರಮ ಕೃಷಿ ಪಂಪ್‍ಸೆಟ್‍ಗಳ ಪೈಕಿ ನಾಲ್ಕು ಲಕ್ಷ ಕೃಷಿ ಪಂಪ್‍ಸೆಟ್‍ಗಳನ್ನು ಸಕ್ರಮಗೊಳಿಸಲಾಗಿದೆ.
ರಾಮನಗರ ಜಿಲ್ಲೆಯಲ್ಲಿ ವಿಶೇಷ ಯೋಜನೆ ಹಮ್ಮಿಕೊಂಡು ಪ್ರತಿ ಕೃಷಿ ಪಂಪ್‍ಸೆಟ್‍ಗೂ ಒಂದೊಂದು ಟಿಸಿ ಒದಗಿಸಲು 1038 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ