ನವದೆಹಲಿ :ಮಾ-೨೮: ಕೆಲ ರಾಜ್ಯಸಭಾ ಸದಸ್ಯರ ಕಾಲಾವಧಿ ಮುಕ್ತಾಯಗೊಂಡಿದ್ದು, ನಿವೃತ್ತಿ ಪಡೆದುಕೊಳ್ಳುತ್ತಿರುವ ಕಾರಣ ಇಂದು ರಾಜ್ಯಸಭೆಯಲ್ಲಿ ಅವರಿಗೆ ಬಿಳ್ಕೋಡುಗೆ ಸಮಾರಂಭ ಆಯೋಜನೆ ಮಾಡಲಾಗಿತ್ತು.
ನಿವೃತ್ತಿಯಾಗುತ್ತಿರುವ ಸದಸ್ಯರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲು ಎದ್ದುನಿಂತಾಗ ಪ್ರತಿಪಕ್ಷಗಳಿಂದ ತೀವ್ರ ಅಡ್ಡಿ ಉಂಟಾದ ಪ್ರಸಂಗ ನಡೆಯಿತು.
ತ್ರಿವಳಿ ತಲಾಕ್ ನಿಷೇಧ ಸೇರಿದಂತೆ ಹಲವು ಮಹತ್ವದ ಬಿಲ್ ಗಳು ಕಾನೂನಿನ ಮಾನ್ಯತೆ ನೀಡಲು ಚರ್ಚೆ ನಡೆಯಬೇಕಾಗಿದೆ ಆದರೆ, ಪ್ರತಿಪಕ್ಷಗಳು ಇದರಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ನರೇಂದ್ರಮೋದಿ ಅಸಮಾಧಾನ ವ್ಯಕ್ತಪಡಿಸಿದರು.ಪ್ರತಿಪಕ್ಷಗಳ ಅಡ್ಡಿಯ ನಡುವೆಯೂ ಮಾತು ಮುಂದುವರೆಸಿದ ಪ್ರಧಾನಿ ತ್ರಿವಳಿ ತಲಾಕ್ ಚರ್ಚೆಯ ಸಂದರ್ಭದಲ್ಲಿ ನಿವೃತ್ತರಾಗುತ್ತಿರುವ ಸದಸ್ಯರು ಸಂಸತ್ತಿನ ಭಾಗವಾಗದಿರುವುದು ದುರದೃಷ್ಟಕರ ಎಂದರು.
ಹೊರಹೊಗುತ್ತಿರುವ ಸದಸ್ಯರ ಕೊಡುಗೆಗಳನ್ನು ಸ್ಮರಿಸಿದ ಪ್ರಧಾನಿ ಸುಗಮ ಕಲಾಪಕ್ಕೆ ಪ್ರತಿಪಕ್ಷಗಳು ಮಾತ್ರವಲ್ಲದೇ ಸರ್ಕಾರದ ಜವಾಬ್ದಾರಿಯೂ ಹೆಚ್ಚಿದೆ ಎಂದರು.
ಭಾರತದ ಪ್ರಜಾಪ್ರಭುತ್ವದಲ್ಲಿ ರಾಜ್ಯಸಭೆಯ ಪಾತ್ರ ಮಹತ್ವದಾಗಿದ್ದು, ಅನೇಕ ದಿಗ್ಗಜ ಸದಸ್ಯರು ಸೇವೆ ಸಲ್ಲಿಸಿದ್ದಾರೆ ಎಂದು ಗುಣಗಾನ ಮಾಡಿದರು.ನಿವೃತ್ತ ಹೊಂದುತ್ತಿರುವ ಸದಸ್ಯರಿಗೆ ಧನ್ಯವಾದ ತಿಳಿಸಿದರು. ಇದೇ ವೇಳೆ ದೇಶದ ಭವಿಷ್ಯಕ್ಕೆ ಅವರ ಕೊಡುಗೆ ಅಪಾರ ಎಂದಿರುವ ಮೋದಿ, ಜೆ. ಕುರಿಯನ್ ನೀಡಿರುವ ಸೇವೆ ನಾವೂ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.
ನಿವೃತ್ತಿ ಹೊಂದುತ್ತಿರುವ ಸದಸ್ಯರ ಮುಂದಿನ ಜೀವನ ಉತ್ತಮವಾಗಿರಲೆಂದು ಹಾರೈಸುವುದಾಗಿ ಪ್ರಧಾನಿ ಮೋದಿ ತಿಳಿಸಿದರು. ಕಳೆದ ಕೆಲ ದಿನಗಳ ಹಿಂದೆ ರಾಜ್ಯಸಭೆಗೆ ಚುನಾವಣೆ ನಡೆದಿದ್ದು, ನೂತನ ಸದಸ್ಯರು ಆಯ್ಕೆಗೊಂಡಿದ್ದಾರೆ.
Disruptions in Rajya Sabha,mention, PM modi speech