ಮನೆಯೊಂದು ಬೆಂಕಿಯಿಂದ ಧಗಧಗಿಸಿ ಮೂವರು ಮಕ್ಕಳು ಸಜೀವ ದಹನ:

ಸೋನೆಭದ್ರ, ಮಾ.27-ಮನೆಯೊಂದು ಬೆಂಕಿಯಿಂದ ಧಗಧಗಿಸಿ ಮೂವರು ಮಕ್ಕಳು ಸುಟ್ಟು ಕರಕಲಾದ ದುರಂತ ಉತ್ತರಪ್ರದೇಶದ ಸೋನೆಭದ್ರದ ರಾಬಟ್ರ್ಸ್‍ಗಂಜ್ ಕೊತ್ವಾಲಿ ಪ್ರದೇಶದ ತೆಂಡು ಗ್ರಾಮದಲ್ಲಿ ಸಂಭವಿಸಿದೆ.
ನಿನ್ನೆ ರಾತ್ರಿ ಮೂವರು ಮಕ್ಕಳು ತಾಯಿಯೊಂದಿಗೆ ನಿದ್ರಿಸುತ್ತಿದ್ದಾಗ ಮನೆಗೆ ಹಠಾತ್ ಬೆಂಕಿ ತಗುಲಿ ಈ ದುರ್ಘಟನೆ ಸಂಭವಿಸಿತು ಎಂದು ಪೆÇಲೀಸರು ಹೇಳಿದ್ದಾರೆ.
ಈ ದುರಂತದಲ್ಲಿ ತಾಯಿಗೆ ಹೆಣ್ಣು ಮಗುವನ್ನು ಮಾತ್ರ ರಕ್ಷಿಸಲು ಸಾಧ್ಯವಾಯಿತು. ಪರ್ವಿನ್ (5), ರುಷ್ಕರ್ (6) ಮತ್ತು ಶಾಹಿದ್(4) ಸಜೀವ ದಹನಗೊಂಡರು. ಈ ಅಗ್ನಿ ಆಕಸ್ಮಿಕಕ್ಕೆ ಕಾರಣ ತಿಳಿದುಬಂದಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ