
ಸಿಡ್ನಿ, ಮಾ. 27- ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 4ನೆ ಟೆಸ್ಟ್ ಪಂದ್ಯದ ವೇಳೆ ನಡೆದ ಚೆಂಡು ವಿರೂಪಗೊಳಿಸಿದ ಪ್ರಕರಣದಿಂದಾಗಿ ನಾಯಕ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್ ವಾರ್ನರ್, ಆಟಗಾರ ಬ್ಯಾನ್ಕ್ರೋಫ್ಟ್ರನ್ನು ಒಂದು ವರ್ಷ ನಿಷೇಧಕ್ಕೊಳಗಿಸಿದ ಬೆನ್ನಲ್ಲೇ ತಂಡದ ತರಬೇತುದಾರ ಲೆಮೆನ್ರ ತಲೆದಂಡವಾಗಿದೆ.
ಚೆಂಡು ವಿರೂಪಗೊಳಿಸಿದ ಆರೋಪದಲ್ಲಿ ಆಟಗಾರ, ನಾಯಕ, ಉಪನಾಯಕರದ್ದೇ ಪ್ರಮುಖ ಪಾತ್ರವಾಗಿರುವುದಿಲ್ಲ ತಂಡವನ್ನು ಸಜ್ಜುಗೊಳಿಸುವ ತರಬೇತುದಾರನು ಒಳಪಡುತ್ತಾನೆ ಆದ್ದರಿಂದ ಅವರಿಗೆ ಶಿಕ್ಷೆ ಆಗಬೇಕೆಂದು ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಒತ್ತಾಯಿಸಿದ ಬೆನ್ನಲ್ಲೇ ಲೆಮೆನ್ ಆಸ್ಟ್ರೇಲಿಯಾ ತಂಡದ ಮುಖ್ಯ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.