ಭಾರತದ ಪ್ರತಿಭಾವಂತ ಶೂಟರ್‍ಗಳಾದ ಮನು ಭಾಕೆರ್ ಮತ್ತು ಅನ್ಮೋಲ್ ಜೋಡಿ ಮಿಶ್ರ 10 ಮೀಟರ್ ಏರ್ ಪಿಸ್ತೂಲ್ ಫೈನಲ್‍ನಲ್ಲಿ ಚಿನ್ನದ ಪದಕ :

ಸಿಡ್ನಿ, ಮಾ.27-ಆಸ್ಪ್ರೇಲಿಯಾದ ಸಿಡ್ನಿಯಲ್ಲಿ ನಡೆಯುತ್ತಿರುವ ಐಎಸ್‍ಎಸ್‍ಎಫ್ ಜ್ಯೂನಿಯರ್ ವಿಶ್ವಕಪ್‍ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಭಾರತದ ಪ್ರತಿಭಾವಂತ ಶೂಟರ್‍ಗಳಾದ ಮನು ಭಾಕೆರ್ ಮತ್ತು ಅನ್ಮೋಲ್ ಜೋಡಿ ಮಿಶ್ರ 10 ಮೀಟರ್ ಏರ್ ಪಿಸ್ತೂಲ್ ಫೈನಲ್‍ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಇದು ಭಾರತಕ್ಕೆ ಲಭಿಸಿರುವ ಏಳನೇ ಬಂಗಾರದ ಪದಕವಾಗಿದೆ.

ಮಹಿಳೆಯರ ಸ್ಕೀಟ್ ಕಿರಿಯರ ವಿಭಾಗದಲ್ಲಿ ಭಾರತದ ಜಿನೆಮತ್ ಸೆಖೋನ್ ಕಂಚಿನ ಪದಕ ಗೆದ್ದಿರುವುದು ಸಹ ಹೆಮ್ಮೆಯ ಸಂಗತಿ.
ಭಾಕೆರ್ ಮತ್ತು ಅನ್ಮೋಲ್ ಜೋಡಿ ಆರಂಭದಿಂದಲೂ ಉತ್ತಮ ಪ್ರದರ್ಶನ ತೋರಿ ದಾಖಲೆಯ ಅತ್ಯಧಿಕ ಅರ್ಹತಾ 5.6 ಸ್ಕೋರ್‍ಗಳೊಂದಿಗೆ ಹಾಗೂ ಹೊಸ ಜ್ಯೂನಿಯರ್ ಕ್ವಾಲಿಫಿಕೇಷನ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಈ ಜೋಡಿಗೆ ತೀವ್ರ ಪೈಪೆÇೀಟಿ ಒಡ್ಡಿದ ಚೀನಾದ ಲಿಯು ಜಿನ್‍ಯಾವೋ ಮತ್ತು ಲಿ ಕ್ಸಿಯು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ