ನೈರೋಬಿ,ಮಾ.27-ಎಚ್ವಿಐ ಸೋಂಕಿತ ಪ್ರಿಯಕರನನ್ನು 22 ಬಾರಿ ಇರಿದು ಕೊಲೆ ಮಾಡಿರುವ ಘಟನೆ ಕೀನ್ಯಾದ ನೈರೋಬಿಯಲ್ಲಿ ನಡೆದಿದೆ.
ಪ್ರಿಯಕರ ಫರೀದ್ನ ಹಾಸಿಗೆಯಡಿ ಎಚ್ಐವಿ ಚಿಕಿತ್ಸೆಗೆ ಸಂಬಂಧಿಸಿದ ಕಾರ್ಡ್ ವೊಂದನ್ನು ನೋಡಿದ ನಂತರ ತನ್ನ ಪ್ರಿಯಕರ ಒಬ್ಬ ಎಚ್ಐವಿ ಪೀಡಿತ ಎಂದು ರೂಪದರ್ಶಿ ರುತ್ಗೆ ಗೊತ್ತಾಗಿದೆ.
ನಾನು ತುಂಬಾ ಪ್ರೀತಿಸುತ್ತಿದ್ದ ,ನಂಬಿಕೆಯ ವ್ಯಕ್ತಿ ಯೇ ಫರೀದ್. ಎಚ್ಐವಿ ಸೋಂಕಿನ ಮೂಲಕ ನನ್ನ ಜೀವನವನ್ನು ನಾಶ ಮಾಡಿದ್ದಾನೆಂದು ತಿಳಿದು ಆಘಾತಕ್ಕೆ ಒಳಗಾಗಿ ಹೀಗಾಗಿ ಇರಿದು ಕೊಲೆ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಈ ವಿಷಯ ಹೊರಗಡೆ ಗೊತ್ತಾದರೆ, ನನ್ನನ್ನು ಸಾಯಿಸಿ ಆತನೂ ಸಾಯುವುದಾಗಿ ಹೇಳಿದ. ನನ್ನನ್ನು ಕಾಪಾಡಿಕೊಳ್ಳುವುದಕ್ಕಾಗಿ ನಾನು ಅಡುಗೆ ಕೋಣೆಯಿಂದ ಚಾಕು ತಂದು ಅವನನ್ನು ಇರಿದು ಕೊಲ್ಲಬೇಕಾಯಿತು ಎಂದು ರುತ್ ಹೇಳಿದ್ದಾರೆ.