
ಹುಬ್ಬಳ್ಳಿ, ಮಾ.27- ಎಟಿಎಂಗೆ ಹಣ ಸಾಗಿಸುತ್ತಿದ್ದ ವಾಹನ ಹೊತ್ತಿ ಉರಿದಿರುವ ಘಟನೆ ತಾಲ್ಲೂಕಿನ ವರೂರು ಬಳಿ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಕೆನರಾ ಬ್ಯಾಂಕ್ಗೆ ಸೇರಿದ ಹಣ ಸಾಗಿಸುತ್ತಿದ್ದ ಸಿಎಫ್ಕೆ ಏಜೆನ್ಸಿಗೆ ಸೇರಿದ ವಾಹನದಲ್ಲಿ ಎಟಿಎಂಗೆ ಹಣ ತುಂಬಿಸಲು ಸುಮಾರು 73 ಲಕ್ಷ ರೂ. ಹಣವನ್ನು ಸಾಗಿಸುತ್ತಿದ್ದಾಗ ತಾಂತ್ರಿಕ ದೋಷದಿಂದ ಎಂಜಿನ್ನಲ್ಲಿ ಬೆಂಕಿ ಹೊತ್ತಿಕೊಂಡು ಇಡೀ ವಾಹನವೇ ಸುಟ್ಟು ಕರಕಲಾಗಿದೆ.
ಅಚ್ಚರಿ ಎಂಬಂತೆ ವಾಹನದಲ್ಲಿದ್ದ ಹಣವಿದ್ದ ಪೆಟ್ಟಿಗೆಯನ್ನು ಸಿಬ್ಬಂದಿಗಳು ಹೊರಗೆ ತೆಗೆದಿದ್ದು , ಹಣಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಪೆÇಲೀಸ್ ಮೂಲಗಳು ತಿಳಿಸಿವೆ.
ಈ ಸಂಬಂಧ ಹುಬ್ಬಳ್ಳಿ ಗ್ರಾಮಾಂತರ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ