ಐಪಿಎಲ್11ರ ಉದ್ಘಾಟನಾ ಪಂದ್ಯದಲ್ಲಿ ಮನರಂಜನೆ ನೀಡಲು ಬಾಲಿವುಡ್ ನಟ ರಣವೀರ್‍ಸಿಂಗ್ ಕೇಳಿದ ಮೊತ್ತ ಕೇಳಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ:

ಮುಂಬೈ, ಮಾ. 27- ಐಪಿಎಲ್11ರ ಉದ್ಘಾಟನಾ ಪಂದ್ಯದಲ್ಲಿ ಮನರಂಜನೆ ನೀಡಲು ಬಾಲಿವುಡ್ ನಟ ರಣವೀರ್‍ಸಿಂಗ್ ಕೇಳಿದ ಮೊತ್ತ ಕೇಳಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ.
ಏಪ್ರಿಲ್ 7 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ 15 ನಿಮಿಷ ಕಾಲ ಪ್ರೇಕ್ಷಕರನ್ನು ರಂಜಿಸಲು ನಟ ರಣವೀರ್‍ಸಿಂಗ್ ಕೇಳಲಾಗಿದೆ.
ಆದರೆ ಈ ವೇಳೆ ಅವರು ಪದ್ಮಾವತಿಯಲ್ಲಿ ತಾವು ನಟಿಸಿದ್ದ ಖಿಲ್ಜಿಯ ಡೈಲಾಗ್‍ಗಳನ್ನು ಹೇಳಿ ರಂಜಿಸಬೇಕೆಂದು ಕೇಳಿಕೊಂಡಿದ್ದರಿಂದಲೋ ಏನೋ ರಣವೀರ್ ಸಿಂಗ್ ಅವರು ಈಗ 5 ಕೋಟಿ ರೂ.ಗಳನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕ್ರಿಕೆಟ್ ಲೆಜೆಂಡ್, ವಿಶ್ವಕಪ್ ವಿಜೇತ ನಾಯಕ ಕಪಿಲ್‍ದೇವ್‍ರ ಜೀವನಾಧಾರಿತ ಚಿತ್ರದಲ್ಲಿ ನಟಿಸುತ್ತಿರುವ ರಣವೀರ್‍ಸಿಂಗ್‍ಗೆ ಐಪಿಎಲ್‍ನ ಉದ್ಘಾಟನಾ ಪಂದ್ಯದಲ್ಲಿ ಪಾಲ್ಗೊಳ್ಳಲು ಮನಸ್ಸಿದ್ದರೂ ಕೂಡ ಅವರು ಖಿಲ್ಜಿ ಡೈಲಾಗ್ ಹೇಳಬೇಕೆಂದು ಕೇಳಿರುವುದರಿಂದ ಅವರೀಗ ಅಡ್ಡಕತ್ತರಿಗೆ ಸ್ಥಿತಿಗೆ ಸಿಲುಕಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ