ಬೆಳಗಾವಿ:ಮಾ-27: ಮಹಿಳೆಯರಿಗೆ ಆಶ್ರಯ ಮನೆ ನೀಡುವುದಾಗಿ ಪುಸಲಾಯಿಸಿ, ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡು ವಂಚಿಸುತ್ತಿದ್ದ ಕಾಮುಕನಿಗೆ ನೊಂದ ಮಹಿಳೆಯರು ಸೇರಿದಂತೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ನಿವಾಸಿ ಮಹಮ್ಮದ್ ರಫೀಕ್ ದೇಸಾಯಿ ಎಂಬುವವನೇ ಆರೋಪಿಯಾಗಿದ್ದು, ಇಂದು ಮಹಿಳೆಯರ ಕೈಗೆ ಸಿಕ್ಕಿಹಾಕಿಕೊಂಡ ಆರೊಪಿಯನ್ನು ಅರೆಬೆತ್ತಲೆಗೊಳಿಸಿ, ಥಳಿಸಿ, ಜಿಲ್ಲಾಧಿಕಾರಿ ಕಛೇರಿವರೆಗೂ ಮೆರವಣಿಗೆ ಮೂಲಕ ಕರೆ ತಂದರು.
ಬಳಿಕ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.