ಹುಬ್ಬಳ್ಳಿ,ಮಾ.26- ಬಿ.ಎಸ್. ಯಡಿಯೂರಪ್ಪ ಕೆಜೆಪಿ ಪಕ್ಷಕ್ಕೆ ಸೇರಿದಾಗ ಅಂದಿನ ಸಿಎಂ ಜಗದೀಶ್ ಶೆಟ್ಟರ್ ನನ್ನನ್ನು ಮನೆಗೆ ಕರೆದಿದ್ದರು. ಹತ್ತು ಕೋಟಿ ರೂ. ಕೊಡುತ್ತೇನೆ ಯಡಿಯೂರಪ್ಪ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಎಂದಿದ್ದರು. ನಾನು ಹಣದ ಆಮಿಷಕ್ಕೆ ಒಳಗಾಗಲಿಲ್ಲ ಎಂದು ಕೆಜೆಪಿ ಅಧ್ಯಕ್ಷ ಪದ್ಮನಾಭ ಪ್ರಸನ್ನಕುಮಾರ್ ಆರೋಪ ಮಾಡಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದ್ರಜಿತ್ ಲಂಕೇಶ್ ಮತ್ತು ಚಂದ್ರಚೂಡ ನನ್ನನ್ನು ಜಗದೀಶ್ ಶೆಟ್ಟರ್ ನಿವಾಸಕ್ಕೆ ಕರೆದುಕೊಂಡು ಹೋಗಿದ್ದರು. ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಆಮಿಷವೊಡ್ಡಿದ್ದರು ಎಂದ ಹೇಳಿದರು.
ಲಿಮೆರಡಿಯನ್ ಹೊಟೇಲ್ಗೆ ಹಣ ಕೊಟ್ಟುಕಳಿಸಿದ್ದರು. ಸುಳ್ಳಾದರೆ ಜಗದೀಶ್ ಶೆಟ್ಟರ್ ಧರ್ಮಸ್ಥಳ ಮಂಜುನಾಥ ಕ್ಷೇತ್ರಕ್ಕೆ ಬಂದು ಆಣೆ ಪ್ರಮಾಣ ಮಾಡಲಿ ನಾನು ಪ್ರಮಾಣ ಮಾಡುತ್ತೇನೆ. ಮುಂದೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸುವಾಗ ಈ ಬಗ್ಗೆ ಹೊಟೇಲ್ ಬಂದು ಹೋದ ಸಿಸಿಟಿವಿ ಫೆÇೀಟೇಜ್ಗಳಿಗೆ ಅವುಗಳನ್ನು ಬಿಡುಗಡೆ ಮಾಡುತ್ತೇನೆ ಎಂದರು.
ಇದೇ ವೇಳೆ ಅವರು ಮುಂಬರುವ ವಿಧಾನಸಭೆ ಚುನಾವಣೆಗೆ ಕೆಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದರು. 43 ಕ್ಷೇತ್ರಗಳ ಕೆಜೆಪಿ ಅಭ್ಯರ್ಥಿಗಳ ಪಟ್ಟಿ ಮಾಡಿದ ಅವರು, ತೇರದಾಳ ಮತ್ತು ಯಶವಂತಪುರ ಕ್ಷೇತ್ರದಿಂದ ಸ್ರ್ಪಸಲಿರುವ ತಾವು ಕಣಕ್ಕೆ ಇಳಿಯುವುದಾಗಿ ಅವರು ತಿಳಿಸಿದರು.