![rohan-bopanna](http://kannada.vartamitra.com/wp-content/uploads/2018/03/rohan-bopanna-678x377.jpg)
ಮಿಯಾಮಿ, ಮಾ.26- ಭಾರತದ ಟೆನ್ನಿಸ್ ತಾರೆ ರೋಹನ್ ಬೋಪಣ್ಣ ಹಾಗೂ ಫ್ರೆಂಚ್ನ ರೋಜರ್ ವಾಸೆಲಿನ್ ಮಿಯಾಮಿ ಓಪನ್ನ 16ನೆ ಸುತ್ತಿನಲ್ಲಿ ಸೋಲುವ ಮೂಲಕ ಕ್ವಾರ್ಟರ್ಫೈನಲ್ನಿಂದ ಹೊರಗುಳಿದಿದ್ದಾರೆ. ಇಂದು ನಡೆದ ಪಂದ್ಯದಲ್ಲಿ ಬೋಪಣ್ಣ ಜೋಡಿಯು ಅಮೆರಿಕಾದ ಸ್ಟೀವ್ ಜಾನ್ಸನ್ ಹಾಗೂ ಶ್ಯಾಮ್ ಕ್ವೇರಿ ಜೋಡಿಯ ವಿರುದ್ಧ 6-7, 5-7,2-6 ಸೆಟ್ಗಳಿಂದ ಸೋಲು ಕಾಣುವ ಮೂಲಕ ನಿರಾಸೆ ಮೂಡಿಸಿದ್ದಾರೆ.