
ನವದೆಹಲಿ:ಮಾ-25: ನ್ಯಾಯಮೂರ್ತಿಗಳ ನೇಮಕ ವಿಚಾರದಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಕೇಂದ್ರದ ಆಡಳಿತಾರೂಢ ಎನ್ ಡಿಎ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಆಕ್ರೋಶವ್ಯಕ್ತಪಡಿಸಿರುವ ಅವರು, ನ್ಯಾಯಮೂರ್ತಿ ಜೋಸೆಫ್ ಅವರು ಉತ್ತರಾಖಂಡ ರಾಜ್ಯದಲ್ಲಿ 2016ರಲ್ಲಿ ರಾಷ್ಟ್ರಪತಿ ಆಡಳಿತ ಹೇರಿದ್ದರು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅವರ ಹೆಸರು ಬಂದಾಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಹಂಗೆ ನೋವುಂಟಾಗಿದೆ ಎಂದು ಹೇಳಿದ್ದಾರೆ.
100 ನ್ಯಾಯಮೂರ್ತಿಗಳ ನೇಮಕಾತಿ ವಿಚಾರದಲ್ಲಿ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ. ಹಲವು ಹೈಕೋರ್ಟ್ ಗಳು ಈ ಒಪ್ಪಿಗೆಗೆ ತಡೆಹಿಡಿದಿದೆ ಎಂದಿರುವ ರಾಹುಲ್ ಅವರು ಕೇಂದ್ರದ ವಿರುದ್ಧ ಹ್ಯಾಷ್ ಟ್ಯಾಗ್’ಗಳನ್ನು ಬಳಕೆ ಮಾಡಿದ್ದಾರೆ.
ಬಾಕಿ ಉಳಿದಿರುವ ಪ್ರಕರಣಗಳ ಅಡಿಯಲ್ಲಿ ಕಾನೂನು ವ್ಯವಸ್ಥೆ ಕುಸಿದಿದೆ. ಸುಪ್ರೀಂಕೋರ್ಟ್ ನಲ್ಲಿ 55,000ಕ್ಕೂ ಹೆಚ್ಚು ಹೆಚ್ಚು ಪ್ರಕರಣಗಳು, ಹೈಕೋರ್ಟ್ ಗಳಲ್ಲಿ 37 ಲಕ್ಷಕ್ಕೂ ಹೆಚ್ಚು ಹಾಗೂ ಕೆಳ ನ್ಯಾಯಾಲಯಗಳನ್ನು 2.6 ಕೋಟಿಗೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ. ದಿಗ್ಭ್ರಮೆಗೊಳಿಸುವ ವಿಚಾರವೆಂದರೆ, ಹೈಕೋರ್ಟ್ ನಲ್ಲಿ 400 ಹಾಗೂ ಕೆಳ ನ್ಯಾಯಾಲಯಗಳಿಗೆ 6000 ನ್ಯಾಯಾಧೀಶರನ್ನು ನೇಮಕ ಮಾಡಿಲ್ಲ. ಆದರೆ, ಕಾನೂನು ಸಚಿವರು ಮಾತ್ರ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.