ರಾಯಚೂರು.ಮಾ.26- ಮಹಾಂತೇಶ ಶಿವಯೋಗಿ ಮಹಾಸ್ವಾಮಿಗಳ ಮಠದಲ್ಲಿ ಗಣೇಶ, ಈಶ್ವರ, ನಂದಿ ವಿಗ್ರಹಗಳ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಕೆ.ರಾಮು ಗಾಣಧಾಳ ಹೇಳಿದರು.
ಅವರಿಂದು ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಪಂಚಮುಖಿ ಗಾಣಧಾಳದಲ್ಲಿ ಮಹಾಂತೇಶ ಶಿವಯೋಗಿ ಮಹಾಸ್ವಾಮಿಗಳ ಆಶ್ರಮದಲ್ಲಿ ನೂತನವಾಗಿ ನಿರ್ಮಾಣ ಮಾಡಿದ ಈಶ್ವರ, ನಂದಿ, ಗಣೇಶ ವಿಗ್ರಹಗಳಮ ಪ್ರತಿಷ್ಠಾಪನೆ ಕಾರ್ಯಕ್ರಮಗಳನ್ನು ಮಾ.28ರಿಂದ ಮೂರು ದಿನಗಳವರೆಗೆ ಹಮ್ಮಿಕೊಂಡಿದೆ ಎಂದರು.
ಈ ಹಿಂದೆ ಮಠಕ್ಕೆ ಭೇಟಿ ನೀಡಿದ ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾರ್ಚಾರು ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಬಿಚ್ಚಾಲಿ ಮಠದ ವೀರತಪಸ್ವಿ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು,ಶ್ರೀಶೈಲ ಮಹಾಸ್ವಾಮಿಗಳು ಕಲಬುರಗಿ, ಪಂಚಮ ಸಿದ್ಧಲಿಂಗಮಹಾಸ್ವಾಮಿಗಳು ನೇರಡಗಂ, ಹೊನ್ನಲಿಂಗ ಮಹಾಸ್ವಾಮಿಗಳು ಸಿಂಧನಕೇರಾ, ಶಾಂತಮಲ್ಲಿಕಾರ್ಜುನ ಪಾಂಡಿತ್ಯರಾಧ್ಯ ಮಹಾಸ್ವಾಮಿ ಹೇಡಗಿಮುದ್ರಾ, ಪಂಚಮುಖಿ ದೇವಸ್ಥಾನದ ಮೂಲ ಅರ್ಚಕ ಶಾಮಾಚಾರ್ಯರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಿ.ಭಾಸ್ಕರ್ ಶೆಟ್ಟಿ, ಶರಣಪ್ಪ, ಪಿ.ಶಂಕರೆಡ್ಡಿ, ಶರಣಪ್ಪ ಸಾಹುಕಾರ, ರಾಚನಗೌಡ ಆಚನೂರು ಸೇರಿದಂತೆ ಇನ್ನಿತರರು ಇದ್ದರು.