ಬೆಂಗಳೂರು ಗೋವಿಂದರಾಜನಗರ ವಾರ್ಡ್ ಬಿ.ಬಿ.ಎಂ.ಪಿ.ಸದಸ್ಯರಾದ ಕೆ.ಉಮೇಶ್ ಶೆಟ್ಟಿರವರ ನೇತೃತ್ವದಲ್ಲಿ ನರ್ಸರಿ,ಪೈಮರಿ ಮತ್ತು ಫ್ರೌಡಶಾಲೆ ತರಗತಿ ಹೊಸದಾಗಿ ಸೇರುವ ಮಕ್ಕಳ ವಿಶೇಷ ದಾಖಲಾತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ .ಕನಿಷ್ಟ 10000ಸಾವಿರ ರೂಪಾಯಿಗಳಲ್ಲಿ ಒಂದು ವರ್ಷದ ಶಿಕ್ಷಣ ,ಆಡ್ಮಿಷನ್ ಮತ್ತು ಪಠ್ಯಪುಸ್ತಕ ,ಸಮವಸ್ತ ಹಾಗೂ ಶಾಲೆ ಹೋಗಿ ಬರಲು ಬಸ್ ಪಾಸ್ ವ್ಯವಸ್ತೆ ನೂತನ ಯೋಜನೆಯನ್ನ ಕಾರ್ಯರೂಪಕ್ಕೆ ತರಲಾಗಿದೆ.
ಕಡಿಮೆ ವೆಚ್ಚ ಹಾಗೂ ಉನ್ನತ ಶಿಕ್ಷಣದ ಬಗ್ಗೆ ಮಾಹಿತಿ ನೀಡಿದ ಗೋವಿಂದರಾಜ ನಗರ ವಾರ್ಡ್ ಬಿ.ಬಿ.ಎಂ.ಪಿ.ಸದಸ್ಯರಾದ ಕೆ.ಉಮೇಶ್ ಶೆಟ್ಟಿರವರು ಕೆ.ಜಿ.ಎಸ್.ಲೇಜೌಟ್ ,ಮಾರೇನಹಳ್ಳಿ ಸೆಂಟ್ ಮೇರಿಸ್ ಅಂಗ್ಲ ಶಾಲೆಯಲ್ಲಿ ಮಕ್ಕಳಿಗೆ ನರ್ಸರಿಯಿಂದ ಫ್ರೌಡಶಾಲೆ ಶಿಕ್ಷಣಕ್ಕೆ ವರ್ಷಕ್ಕೆ ಹತ್ತು ರೂಪಾಯಿಗಳಲ್ಲಿ ಹೈಟೆಕ್ ಶಿಕ್ಷಣ ನೀಡಲಾಗುತ್ತಿದೆ .ಯಾವುದೇ ಕ್ಷೇತ್ರ ಅಥವಾ ದೇಶ ಅಭಿವೃದ್ದಿಯಾಗಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ .ಇಂದು ಶಿಕ್ಷಣ ವ್ಯಾಪರೀಕರಣ ವಾಗಿದೆ ಮಾಧ್ಯಮ ವರ್ಗ ,ಬಡವರಿಗೆ ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ .ಅಂತಹ ಮಕ್ಕಳು ಸಹ ಉನ್ನತ ಶಿಕ್ಷಣ ಪಡೆಯಬೇಕು ಮತ್ತು ಉನ್ನತ ಹುದ್ದೆಗಳಲ್ಲಿ ಅಲಂಕಾರಿಸಬೇಕು .ಇಂತಹ ಮಹತ್ವವಾದ ಉದ್ದೇಶದಿಂದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಮಕ್ಕಳಿಗೆ ಕನಿಷ್ಟ ಖರ್ಚು ,ಉನ್ನತ ವ್ಯಾಸಂಗ ನೀಡಲು ಸಹಕಾರಿಯಾಗಿದೆ.ಈಗಾಗಲೇ ನೂರಾರು ವಿದ್ಯಾರ್ಥಿಗಳು ಪ್ರವೇಶ ಪಡಿದಿದ್ದಾರೆ .