ಬೀದರ್:ಮಾ-25: ಕೆಎಸ್ಆರ್ಟಿಸಿ ಬಸ್ ನಿರ್ವಾಹಕರೊಬ್ಬರು ಬಸ್ ನಲ್ಲೇ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೀದರ್ ನ ಬಸವಕಲ್ಯಾಣ ಡಿಪೋದಲ್ಲಿ ನಡೆದಿದೆ.
ಶಿವರಾಜ ಕುಂಬಾರೆ ಮುಧೋಳ (50)ಮೃತ ವ್ಯಕ್ತಿ. ಮೇಲಧಿಕಾರಿಗಳು ಐದು ದಿನಗಳಿಂದ ಕೆಲಸಕ್ಕೆ ಅನುವು ಮಾಡಿಕೊಡದೆ ಇದ್ದಿದ್ದಕ್ಕೆ ಮನನೊಂದ ನಿರ್ವಾಹಕ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಹಿರಿಯ ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಸ್ಥಳಕ್ಕೆ ಬಸವಕಲ್ಯಾಣ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
KSRTC Bus, conductor,suicide, inside the Bus