ಬೆಂಗಳೂರು:ಮಾ-25: ನಮ್ಮ ಬೆಂಗಳೂರು ಫೌಂಡೇಶನ್ನಿಂದ ನೀಡುವ ನಮ್ಮ ಬೆಂಗಳೂರು ಪ್ರಶಸ್ತಿಯನ್ನು ಹೋಮ್‌ಗಾರ್ಡ್ಸ್ ಮತ್ತು ಸಿವಿಲ್ ಡಿಫೆನ್ಸ್ ವಿಭಾಗದ ಐಜಿಪಿ ಡಿ. ರೂಪಾ ನಿರಾಕರಿಸಿದ್ದಾರೆ.
ಪ್ರಶಸ್ತಿ ಕುರಿತಂತೆ ‘ನಮ್ಮ ಬೆಂಗಳೂರು ಫೌಂಡೇಶನ್’ಗೆ ಪತ್ರ ಬರೆದಿರುವ ರೂಪಾ ಅವರು, ‘ನಮ್ಮ ಬೆಂಗಳೂರು ಪ್ರಶಸ್ತಿ’ಗೆ ನನ್ನನ್ನು ಪರಿಗಣಿಸಿದ್ದಕ್ಕೆ ಧನ್ಯವಾದ ತಿಳಿಸುತ್ತೇನೆ. ಆದರೆ ಈ ಪ್ರಶಸ್ತಿ ಭಾರೀ ಮೊತ್ತದ ನಗದು ಬಹುಮಾನ ಹೊಂದಿದೆ, ಹಾಗಾಗಿ ಅದನ್ನು ಸ್ವೀಕರಿಸಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ ಎಂದು ತಿಳಿಸಿದ್ದಾರೆ.
ಪ್ರತಿಯೊಬ್ಬ ಸರ್ಕಾರಿ ನೌಕರರೂ ಎಲ್ಲ ವಿಧದ ರಾಜಕೀಯ ಸಂಸ್ಥೆಗಳು ಮತ್ತು ರಾಜಕೀಯ ಪ್ರೇರಿತವಾಗಿರುವ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಬೇಕು ಎಂಬ ನಿಯಮವಿದೆ. ಈ ನಿಯಮವನ್ನು ಅನುಸರಿಸಿದಾಗ ಮಾತ್ರವೇ ಸರ್ಕಾರಿ ನೌಕರರು ಸಾರ್ವಜನಿಕರ ದೃಷ್ಟಿಯಲ್ಲಿ ಪರಿಶುದ್ಧರಾಗಿರಲು ಸಾಧ್ಯ. ಅಷ್ಟೇ ಅಲ್ಲದೆ ಈಗ ರಾಜ್ಯ ವಿಧಾನಸಭೆ ಚುನಾವಣೆ ಸಹ ಹತ್ತಿರವಿರುವುದರಿಂದ ಪ್ರಶಸ್ತಿ ಮತ್ತು ಸನ್ಮಾನಗಳನ್ನು ಸ್ವೀಕರಿಸುವುದು ಉಚಿತವಲ್ಲ ಎಂದು ರೂಪಾ ಅವರು ಪತ್ರದಲ್ಲಿ ತಿಳಿಸಿದ್ದಾರೆ.
IPS D Roopa, refuses to accept, Namma Bengaluru award