ಹೊಸದಿಲ್ಲಿ: ರಾಮ ಮತ್ತು ರಾಮಾಯಣ ಆಷಿಯಾನ್ ರಾಷ್ಟ್ರಗಳಿಗೂ ಸ್ಫೂರ್ತಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
42ನೇ ಆವೃತ್ತಿಯ ಮನ್ ಕಿ ಬಾತ್ ಕಾರ್ಯಕ್ರಮಲ್ಲಿ ಮಾತನಾಡುತ್ತಾ ಮೋದಿ ಹೀಗೆ ನುಡಿದರು. ಅಂತೆಯೇ ರಾಮನವಮಿ ಹಬ್ಬದ ಹಿನ್ನಲೆಯಲ್ಲಿ ದೇಶದ ಜನತೆಗೆ ಶುಭಾಶಯಗಳನ್ನು ಕೋರಿದರು.
ಜನವರಿ 26 ಗಣರಾಜ್ಯೋತ್ಸವ ದಿನದಂದು ಆಷಿಯಾನ್ ರಾಷ್ಟ್ರಗಳಿಂದ ಗಣ್ಯರು ಭಾರತಕ್ಕೆ ಆಗಮಿಸಿದ್ದರು. ಈ ವೇಳೆ ಆ ರಾಷ್ಟ್ರಗಳ ಸಾಂಸ್ಕೃತಿಕ ತಂಡಗಳು ಪ್ರದರ್ಶಗಳನ್ನು ನೀಡಿದ್ದವು. ಇದರಲ್ಲಿ ಬಹುಪಾಲು ದೇಶಗಳು ನಮ್ಮ ಮುಂದೆ ರಾಮಾಯಣವನ್ನೇ ನಮ್ಮ ಮುಂದೆ ಪ್ರಸ್ತುತ ಪಡಿಸಿದ್ದರು ಎಂಬುದೇ ಅಪಾರ ಹೆಮ್ಮೆಯ ವಿಚಾರವಾಗಿದೆ ಸ್ಮರಿಸಿದರು.
ಮಹಾತ್ಮ ಗಾಂಧಿಯವರ ಜೀವನದಲ್ಲಿ ರಾಮನ ಶಕ್ತಿಯಿತ್ತು. ವಿಶ್ವ ನೋಡಿದ ರೀತಿಯಲ್ಲಿ ಭಾರತ ಬದಲಾಗಿದೆ. ಇದೀಗ ಭಾರತವನ್ನು ಇಡೀ ವಿಷ್ವ ಗೌರವದಿಂದ ನೋಡುತ್ತಿದೆ.ರಾಮ ಮತ್ತು ರಾಮಾಯಣ ಆಷಿಯಾನ್ ರಾಷ್ಟ್ರಗಳಿಗೆ ಸ್ಪೂರ್ತಿಯಾಗಿದೆ ಎಂದರು.