ಚೀನಾ ಮತ್ತು ಪಾಕಿಸ್ತಾನ ಗಡಿಗಳಲ್ಲಿ ನಿಯೋಜನೆಗೊಂಡಿರುವ ಇನ್‍ಫೆಂಟ್ರಿ (ಪದಾತಿದಳ) ಯೋಧರಿಗೆ ತ್ವರಿತವಾಗಿ ಈ ಆಯುಧಗಳನ್ನು ಕೇಂದ್ರ ಸರ್ಕಾರ ಪೂರೈಸಲಿದೆ:

ನವದೆಹಲಿ, ಮಾ.24-ಸ್ವಲ್ಪ ವಿಳಂಬದ ನಂತರ ಕೇಂದ್ರ ಸರ್ಕಾರ ಕೊನೆಗೂ ಗಡಿ ಭಾಗದ ಭಾರತೀಯ ಯೋಧರಿಗೆ ಹೊಸ ರೈಫಲ್‍ಗಳು ಮತ್ತು ಹಗುರ ಮೆಷಿನ್ ಗನ್‍ಗಳು(ಎಲ್‍ಎಂಬಿಗಳು) ಸೇರಿದಂತೆ ಅಗತ್ಯವಾದ ಶಸ್ತ್ರಾಸ್ತ್ರಗಳನ್ನು ಒದಗಿಸಲು ಮುಂದಾಗಿದೆ.
ಚೀನಾ ಮತ್ತು ಪಾಕಿಸ್ತಾನ ಗಡಿಗಳಲ್ಲಿ ನಿಯೋಜನೆಗೊಂಡಿರುವ ಇನ್‍ಫೆಂಟ್ರಿ (ಪದಾತಿದಳ) ಯೋಧರಿಗೆ ತ್ವರಿತವಾಗಿ ಈ ಆಯುಧಗಳನ್ನು ಕೇಂದ್ರ ಸರ್ಕಾರ ಪೂರೈಸಲಿದೆ.
ಮೂರದಿಂದ 12 ತಿಂಗಳ ಅವಧಿಯಲ್ಲಿ ಶಸ್ತ್ರಾಸ್ತ್ರಗಳು ಪೂರೈಕೆಯಾಗಲಿದ್ದು, 72,500 ರೈಫಲ್‍ಗಳು, 93,895 ಕ್ಲೋಸ್‍ಕ್ವಾರ್ಟರ್ ಬ್ಯಾಟಲ್ ಕಾರ್ಬೈನ್‍ಗಳು ಹಾಗೂ 16,479 ಲೈಟ್ ಮೆಷಿನ್ ಗನ್‍ಗಳನ್ನು ಹೊಂದಲು ಆರಂಭಿಕ ಟೆಂಡರ್‍ಗಳನ್ನು ಆಹ್ವಾನಿಸಲಾಗಿದೆ. ಇದಕ್ಕಾಗಿ 5,366 ಕೋಟಿ ರೂ. ವೆಚ್ಚವಾಗಲಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಭಾರತೀಯ ಭೂಸೇನೆಯಲ್ಲಿ ಓಬೀರಾಯನ ಕಾಲದ ಆಯುಧಗಳಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಲಿದ್ದು, ಸದ್ಯದಲ್ಲೇ ಗಡಿ ಭಾಗದ ಯೋಧರಿಗೆ ಹೊಸ ರೈಫಲ್‍ಗಳು ಮತ್ತು ಎಲ್‍ಎಂಜಿಗಳು ಲಭ್ಯವಾಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ