ಬೆಂಗಳೂರು, ಮಾ.24- ಗುತ್ತಿಗೆದಾರರೊಬ್ಬರು ಬ್ಯಾಂಕ್‍ನಲ್ಲಿ 2.50 ಲಕ್ಷ ಹಣ ಡ್ರಾ ಮಾಡಿಕೊಂಡು ಮೊದಲೇ ಮನೆಯಿಂದ ತಂದಿದ್ದ 2 ಲಕ್ಷದ ಜತೆಗೆ ಈ ಹಣವನ್ನೂ ಸೇರಿಸಿ ಕಾರಿನಲ್ಲಿಟ್ಟುಕೊಂಡು ಇನ್ನೇನು ಕಾರು ಚಾಲನೆ ಮಾಡಬೇಕೆಂಬುವಷ್ಟರಲ್ಲಿ ವ್ಯಕ್ತಿಯೊಬ್ಬ ಇವರ ಗಮನ ಸೆಳೆದು 4.50 ಲಕ್ಷ ರೂ. ಕಳ್ಳತನ ಮಾಡಿರುವ ಘಟನೆ ವಿಜಯನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗುತ್ತಿಗೆದಾರ ಜಗದೀಶ್ ಎಂಬುವವರು ಆರ್‍ಪಿಸಿ ಲೇಔಟ್‍ನಲ್ಲಿನ ಐಸಿಐಸಿಐ ಬ್ಯಾಂಕ್ ಬಳಿ ನಿನ್ನೆ ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಬಂದು ಕಾರು ನಿಲ್ಲಿಸಿ 2.50 ಲಕ್ಷ ರೂ. ಹಣ ಡ್ರಾ ಮಾಡಿಕೊಂಡು ಕಾರಿನ ಬಳಿ ಬಂದು ಮೊದಲೇ ತಂದಿದ್ದ 2 ಲಕ್ಷ ಹಣದ ಜತೆಗೆ ಈ ಹಣವನ್ನೂ ಸೇರಿಸಿ ಒಟ್ಟು 4.50 ಲಕ್ಷ ರೂ.ಗಳನ್ನು ಬಂಡಲ್ ಮಾಡಿ ಸೀಟಿನಲ್ಲಿಟ್ಟಿದ್ದಾರೆ.
ಇನ್ನೇನು ಕಾರು ಚಾಲಕನೆ ಮಾಡಬೇಕೆನ್ನುವಷ್ಟರಲ್ಲಿ ವ್ಯಕ್ತಿಯೊಬ್ಬ ಇವರ ಬಳಿ ಬಂದು ಕಾರಿನ ಟಯರ್ ಪಂಕ್ಚರ್ ಆಗಿದೆ ಎಂದು ಹೇಳಿದ್ದಾನೆ. ಈ ವ್ಯಕ್ತಿಯ ಮಾತನ್ನು ನಂಬಿದ ಜಗದೀಶ್ ಅವರು ಕಾರಿನಿಂದ ಇಳಿದು ಟಯರ್ ಗಮನಿಸುತ್ತಿದ್ದಂತೆ ಅತ್ತ ವಂಚಕ ಕ್ಷಣಾರ್ಧದಲ್ಲಿ ಸೀಟಿನ ಮೇಲಿದ್ದ 4.50 ಲಕ್ಷ ಹಣದೊಂದಿಗೆ ಪರಾರಿಯಾಗಿದ್ದಾನೆ.
ಜಗದೀಶ್ ಅವರು ಟಯರ್ ಗಮನಿಸಿ ಏನೂ ಆಗಿಲ್ಲವೆಂದುಕೊಂಡು ಕಾರಿನೊಳಗೆ ನೋಡಿದಾಗ ಹಣ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ.
ತಕ್ಷಣ ವಿಜಯನಗರ ಠಾಣೆ ಪೆÇಲೀಸರಿಗೆ ವಿಷಯ ತಿಳಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೆÇಲೀಸರು ದರೋಡೆಕೋರನಿಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.