![index](http://kannada.vartamitra.com/wp-content/uploads/2018/03/index-63-600x381.jpg)
ಬೆಂಗಳೂರು, ಮಾ.24- ಕಂಟ್ರಾಕ್ಟರ್ರೊಬ್ಬರ ಕುಟುಂಬದವರೆಲ್ಲ ತಿರುಪತಿಗೆ ತೆರಳಿದ್ದಾಗ ಇವರ ಮನೆಯ ಬಾಗಿಲು ಮೀಟಿ ಒಳನುಗ್ಗಿದ ಚೋರರು 9.50 ಲಕ್ಷ ನಗದು ಸೇರಿದಂತೆ 20 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ವಿದ್ಯಾರಣ್ಯಪುರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪಿಡಬ್ಲ್ಯೂಡಿ ಕಂಟ್ರಾಕ್ಟರ್ ಆಗಿರುವ ಸುಂದರಂ ನಾಯ್ಡು ಎಂಬುವವರು ಕುಟುಂಬ ಸಮೇತ ತಿರುಪತಿಗೆ ತೆರಳಿದ್ದರು.
ಈ ವೇಳೆ ಕಳ್ಳರು ಕಿಟಕಿಯ ಸರಳು ಮುರಿದು ಒಳಗೆ ಹಾರಿ ಮುಂಬಾಗಿಲಿನ ಬೀಗ ಮೀಟಿ ಒಳನುಗ್ಗಿ ಬೀರುವನ್ನು ಒಡೆದು ಅದರಲ್ಲಿದ್ದ 9.50 ಲಕ್ಷ ರೂ. ನಗದು, 447 ಗ್ರಾಂ ತೂಕದ ಚಿನ್ನಾಭರಣ, 4 ಕೆಜಿ ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ತಿರುಪತಿಯಿಂದ ಸುಂದರಂ ನಾಯ್ಡು ಕುಟುಂಬ ನಿನ್ನೆ ಮನೆಗೆ ವಾಪಸಾದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ತಕ್ಷಣ ವಿದ್ಯಾರಣ್ಯಪುರ ಠಾಣೆ ಪೆÇಲೀಸರಿಗೆ ತಿಳಿಸಿದ್ದು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರೊಂದಿಗೆ ಸ್ಥಳಕ್ಕಾಗಮಿಸಿದ ಪೆÇಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.