ಬೆಂಗಳೂರು, ಮಾ.24- ಕಳ್ಳತನವನ್ನೇ ರೂಢಿ ಮಾಡಿಕೊಂಡಿದ್ದ ಖದೀಮ ಜೈಲಿನಿಂದ ಹೊರಬಂದು ಪುನಃ ಸಹಚರರೊಂದಿಗೆ ಸೇರಿಕೊಂಡು ಮನೆಗಳ್ಳತನ ಮಾಡುತ್ತಿದ್ದ ನಾಲ್ವರನ್ನು ಜಯನಗರ ಠಾಣೆ ಪೆÇಲೀಸರು ಬಂಧಿಸಿ 25 ಲಕ್ಷ ಮೌಲ್ಯದ ವಜ್ರ, ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಮಳವಳ್ಳಿ ತಾಲೂಕಿನ ಸಿದ್ದ (25), ಬೆಂಗಳೂರಿನ ಸತ್ಯವೇಲು (43), ಬಾಬು (25), ಸುರೇಶ (32) ಬಂಧಿತ ಕಳ್ಳರಾಗಿದ್ದು, ಇವರಿಂದ 25 ಲಕ್ಷ ಮೌಲ್ಯದ 700 ಗ್ರಾಂ ಚಿನ್ನಾಭರಣ, 40 ಗ್ರಾಂ ತೂಕದ ವಜ್ರದ ಆಭರಣ ಹಾಗೂ ಒಂದು ಪಲ್ಸರ್ ಬೈಕ್ ವಶಪಡಿಸಿಕೊಂಡಿದ್ದಾರೆ.
ಪ್ರಮುಖ ಆರೋಪಿ ಸಿದ್ದ ರೂಢಿಗತ ಕನ್ನಗಳವು ಕೃತ್ಯದಲ್ಲಿ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಮತ್ತೆ ಕನ್ನಗಳವು ಮಾಡುತ್ತಿದ್ದನು.
ಈ ಹಿಂದೆ ಮೈಕೊ ಲೇಔಟ್ ಪ್ರಕರಣದಲ್ಲಿ ಬಂಧಿತನಾಗಿ ಮೂರು ತಿಂಗಳು ಜೈಲಿನಲ್ಲಿದ್ದು, ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿ ಮತ್ತೆ ಬಸವನಗುಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿ ಜೈಲಿನಲ್ಲಿದ್ದನು.
ಈ ಪ್ರಕರಣದಲ್ಲೂ ಜಾಮೀನು ಪಡೆದು ಹೊರಬಂದ ಮೂರು ತಿಂಗಳ ನಂತರ ಮತ್ತೆ ಪ್ರಕರಣವೊಂದರಲ್ಲಿ ಜೈಲಿನಲ್ಲಿದ್ದನು. ಕಳೆದ ಫೆ.6ರಂದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಈತ ಮತ್ತೆ ನಾಲ್ಕು ದಿನಗಳೊಳಗೆ ರಾಜರಾಜೇಶ್ವರಿನಗರ ವ್ಯಾಪ್ತಿಯಲ್ಲಿ ಕನ್ನಗಳವು ಮಾಡಿ ಪರಾರಿಯಾಗಿದ್ದನು.
ಈ ಪ್ರಕರಣದ ತನಿಖೆ ಕೈಗೊಂಡಿದ್ದ ಜಯನಗರ ಠಾಣೆ ಪೆÇಲೀಸರು ಆರೋಪಿಗಳ ಪತ್ತೆಗಾಗಿ ತಂಡ ರಚಿಸಿದ್ದರು. ಈ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಕೊನೆಗೂ ಕುಖ್ಯಾತ ಆರೋಪಿ ಸಿದ್ದು ಸೇರಿದಂತೆ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳ ಪೈಕಿ ಬಾಬು ಮತ್ತು ಸುರೇಶ ಕಳವು ಮಾಲುಗಳನ್ನು ಸ್ವೀಕರಿಸಿ ಆರೋಪಿಗಳಿಗೆ ಸಹಕರಿಸುತ್ತಿದ್ದರು. ಆರೋಪಿ ಸತ್ಯವೇಲು ಸುಬ್ರಹ್ಮಣ್ಯ ಠಾಣೆ ಪ್ರಕರಣವೊಂದರಲ್ಲಿ ಜೈಲಿನಲ್ಲಿದ್ದಾಗ ಸಿದ್ದನ ಪರಿಚಯವಾಗಿ ಜೈಲಿನಿಂದ ಬಿಡುಗಡೆಯಾದ ನಂತರ ಇಬ್ಬರೂ ಸೇರಿ ಕನ್ನಗಳವು ಕೃತ್ಯ ಎಸಗುತ್ತಿದ್ದುದು ವಿಚಾರಣೆಯಿಂದ ತಿಳಿದುಬಂದಿದೆ.
ದಕ್ಷಿಣ ವಿಭಾಗದ ಉಪ ಪೆÇಲೀಸ್ ಆಯುಕ್ತ ಡಾ.ಶರಣಪ್ಪ ಮಾರ್ಗದರ್ಶನದಲ್ಲಿ ಸಹಾಯಕ ಪೆÇಲೀಸ್ ಕಮಿಷನರ್ ಶ್ರೀನಿವಾಸ್ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಭರತ್ ಅವರನ್ನೊಳಗೊಂಡ ತಂಡ ನಡೆಸಿದ ಉತ್ತಮ ಕಾರ್ಯವನ್ನು ನಗರ ಪೆÇಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.