ರಸ್ತೆ ಬದಿಯಲ್ಲಿ ಅಪರಿಚಿತ  ಶವ ಪತ್ತೆ:

ಹಾಸನ,ಮಾ.23- ರಸ್ತೆ ಬದಿಯಲ್ಲಿ ಅಪರಿಚಿತ  ಶವ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಇಂದು ಬೆಳಗ್ಗೆ ತಾಲ್ಲೂಕಿನ ಕಲ್ಕೆರೆ ಬಳಿ ಸುಮಾರು 22 ವರ್ಷದವರಂತೆ ಕಾಣುವ ಯುವತಿಯ ಶವ ಪತ್ತೆಯಾಗಿದೆ.  ಸಾರ್ವಜನಿಕರು ಶವವನ್ನು ಕಂಡು ಪೆÇಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಪೆÇಲೀಸರು ಪರಿಶೀಲಿಸಿ ಈ ಯುವತಿಯನ್ನು ಕೊಲೆ ರಸ್ತೆ ಬದಿಗೆ ಎಸೆದು ದುಷ್ಕರ್ಮಿಗಳು ಪರಾರಿಯಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ